ನೋಟು ಅಮಾನ್ಯೀಕರಣದ ಬಳಿಕ ಬೆಂಗಳೂರು ಒನ್ ಮೂಲಕ ಸುಮಾರು 410 ಕೋಟಿ ರೂ ಅವ್ಯವಹಾರ ನಡೆಸಿರುವ ಆರೋಪ ಮಾಜಿ ಸಿಎಂ ಸಿದ್ದರಾಮಯ್ಯ , ಸಚಿವ ಕೆ.ಜೆ ಜಾರ್ಜ್ ಮತ್ತು ಶಾಸಕ ಭೈರತಿ ಬಸವರಾಜ್ ವಿರುದ್ಧ ಕೇಳಿಬಂದಿದೆ. ಈ ಮೂವರು ಅಕ್ರಮವಾಗಿ 410 ಕೋಟಿ ರೂ ನೋಟು ಬದಲಾವಣೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ಆರೋಪಿಸಿದ್ದಾರೆ.
ಬಿಜೆಪಿಯ ಬೆಂಗಳೂರು ನಗರ ವಕ್ತಾರ ಎನ್ ಆರ್ ರಮೇಶ್ ಅವರು ಈ ಬಗ್ಗೆ ಇಂದು ಮಾಧ್ಯಮಗೋಷ್ಠೀಯಲ್ಲಿ ಮಾತನಾಡಿ ಹಗರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಇದೇ ವೇಳೆ ಅವರು ಮಾತನಾಡಿ ಬೆಂಗಳೂರು ಒನ್ ನಲ್ಲಿ ಗ್ರಾಹಕರಿಂದ ಸಂಗ್ರಹವಾದ ಸಣ್ಣ ಮೊತ್ತದ ಹಣವನ್ನು ಅಕ್ರಮವಾಗಿ ಕೆಜೆ ಜಾರ್ಜ್, ಸಿದ್ರಾಮಯ್ಯ ಮತ್ತು ಭೈರತಿ ಬಸವರಾಜ್ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಮಾಡಿದ್ದಾರೆ.