ಗೋಲ್ಡನ್ ಸ್ಟಾರ್ ಗಣೇಶ್ ಇಂದು 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಬೆಂಗಳೂರಿನ ಆರ್ ಆರ್ ನಗರದಲ್ಲಿನ ತಮ್ಮ ನಿವಾಸದ ಮುಂದೆ ಗಣೇಶ್ ಅಭಿಮಾನಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಕೇಕ್ ಕತ್ತರಿಸಿ ಹುಟ್ಟುಹಬ್ಬ ಸಂಭ್ರಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ತನ್ನ ಪತ್ನಿ ಶಿಲ್ಪಾ ಎರಡು ವರ್ಷದಿಂದ ಬರ್ತ್ ಡೇ ಗಿಫ್ಟ್ ಅಂತ ಏನನ್ನೂ ಕೊಟ್ಟಿಲ್ಲ ಎಂದರು.
ಶಿಲ್ಪಾ ನೀಡಿದ ಗಿಫ್ಟ್ ಏನೆಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಗಂಡ-ಹೆಂಡ್ತಿ ಮಧ್ಯೆ ಏನೂ ಗಿಫ್ಟ್ ಅಂತ ಇರಲ್ಲ. ವರ್ಷಕ್ಕೆ ಏನಾದರು ತಗೋಬೇಕೆಂದು ಕೊಂಡಿರ್ತೀವಿ, ಅದನ್ನು ಹುಟ್ಟು ಹಬ್ಬದ ದಿನದಂದೇ ತೆಗೆದುಕೊಳ್ತೀವಿ ಎಂದ ಅವರು ನನ್ನ ಹೆಂಡ್ತಿ ಶಿಲ್ಪಾ ಎರಡು ವರ್ಷದಿಂದ ಏನೂ ಗಿಫ್ಟ್ ಕೊಟ್ಟಿಲ್ಲ ಎಂದು ತಮಾಷೆ ಮಾಡಿದರು.
ಹುಟ್ಟುಹಬ್ಬ ಆಚರಿಸಿ ಹಾರೈಸಿದ ಅಭಿಮಾನಿಗಳಿಗೆ ಇದೇ ವೇಳೆ ಧನ್ಯವಾದ ತಿಳಿಸಿದ್ರು.