ಅಭಿಮಾನಿಯೊಬ್ಬರು ತಮ್ಮ ಆಡಿ ಕ್ಯೂ 7 ಕಾರಿನ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಟೋಗ್ರಾಫ್ ಹಾಕಿಸಿಕೊಂಡಿದ್ದಾರೆ.
ದರ್ಶನ್ ತಮ್ಮ ಅಭಿಮಾನಿಗಳ ಆಟೋ ಮೇಲೆ ಸಾಕಷ್ಟು ಬಾರಿ ಆಟೋಗ್ರಾಫ್ ಹಾಕಿದ್ದಾರೆ.
ಇದೀಗ ಅಭಿಮಾನಿಯೊಬ್ಬರು ತಾವು ಖರೀದಿಸಿದ ಕಾರಿನ ಮೇಲೆ ದರ್ಶನ್ ಅವರ ಆಟೋಗ್ರಾಫ್ ಹಾಕಿಸಿಕೊಳ್ಳಬೇಕು ಎಂದು ಕೊಂಡಿದ್ದರು. ಅವರ ಆಸೆಯಂತೆ ಅವರು ಕೊಂಡುಕೊಂಡ ಆಡಿ ಕ್ಯೂ ಕಾರಿನ ಮೇಲೆ ದರ್ಶನ್ ತಮ್ಮ ಆಟೋಗ್ರಾಫ್ ನೀಡಿದ್ದಾರೆ. ‘ಡ್ರೈವ್ ಸೇಫ್’ ಎಂದು ದರ್ಶನ್ ಬರೆದಿದ್ದಾರೆ.