ಮುಸ್ಸಂಜೆ ಮಹೇಶ್ ನಿರ್ದೇಶನದ , ಮುಂದಿನವಾರ ಬಿಡುಗಡೆ ಆಗಲಿರುವ ಎಂಎಂಸಿಎಚ್ ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ.
ಎಂಎಂಸಿಎಚ್ ಒಂದು ಮಹಿಳಾ ಪ್ರಧಾನ ಚಿತ್ರ.
ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ, ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್, ಸುಧಾ ಬೆಳವಾಡಿ ಅವರ ಪುತ್ರಿ ಸಂಯುಕ್ತ ಹೊರನಾಡು ಹಾಗೂ ಹಿರಿಯ ನಟಿ ಸುಮಿತ್ರಾ ಅವರ ಪುತ್ರಿ ದೀಪ್ತಿ (ನಕ್ಷತ್ರ) ನಾಯಕಿಯರಾಗಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ರಾಗಿಣಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ರಘುಭಟ್ ಮತ್ತು ಯುವರಾಜ್ ಚಿತ್ರದ ನಾಯಕರು. ಎಸ್ ಪುರುಷೋತ್ತಮ್ , ಜಾನಕಿ ರಾಮ್ ಮತ್ತು ಅರವಿಂದ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಮೈಸೂರಿನ ಪ್ರತಿಷ್ಠಿತ ಕಾಲೇಜ್ ವೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂಎಂಸಿಎಚ್. ಇದೊಂದು ಮಹಿಳಾ ಪ್ರಧಾನ ಚಿತ್ರ.
ತಾನು ಓದುತ್ತಿದ್ದ ವೇಳೆಯಲ್ಲಿ ನಡೆದ ಘಟನೆಯನ್ನು ಆಧರಿಸಿ ಮುಸ್ಸಂಜೆ ಮಹೇಶ್ ಚಿತ್ರ ಮಾಡಿದ್ದಾರೆ. ಅವರು ಹೇಳುವಂತೆ ಆಗ ನಡೆದ ಘಟನೆ ಸುದ್ದಿ ಆಗಿರಲಿಲ್ಲ.ಪೊಲೀಸ್ ಅಧಿಕಾರಿಗಳು ಸುದ್ದಿಯಾಗದಂತೆ ನೋಡಿಕೊಂಡಿದ್ದರಂತೆ.
ಈ ವಿಷಯ ಯಾರಿಗೂ ಗೊತ್ತಿಲ್ಲವಂತೆ. ಹೇಳಬೇಕೆಂದುಕೊಂಡಿರುವುದನ್ನು ಸಿನಿಮಾ ಮೂಲಕ ಹೇಳುತ್ತಿದ್ದಾರಂತೆ. ಎಂಎಂಸಿಎಚ್ ಅಂದರೇನು ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕಂತೆ.
ನಿನ್ನೆ ಎರಡನೇ ಟ್ರೇಲರ್ ಬಿಡುಗಡೆ ಆಗಿದೆ. ಇಲ್ಲಿದೆ ಟ್ರೇಲರ್, ನೋಡಿ…