ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಗೊಂಬೆ ಖ್ಯಾತಿಯ ನಿವೇದಿತಾ ಗೌಡ ಅವರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಅವರ ಮದ್ವೆ ಫಿಕ್ಸ್ ಆಗಲಿದೆ..?!
ಬಿಗ್ ಬಾಸ್ ಮನೆಯಲ್ಲಿ ತುಂಬಾ ಕ್ಲೋಸ್ ಆಗಿದ್ದ ಚಂದನ್ ಮತ್ತು ನಿವೇದಿತಾ ಅಲ್ಲಿಂದ ಆಚೆ ಬಂದ ಮೇಲೆ ಇನ್ನೂ ಹತ್ತಿರವಾಗಿದ್ದಾರೆ. ಆಗಾಗಾ ಭೇಟಿ ಆಗುತ್ತಿದ್ದಾರೆ. ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ಖಾಸಗಿ ವಾಹಿನಿಯೊಂದರ ಜೊತೆ ಮಾತಾಡಿದ ಚಂದನ್ ಶೆಟ್ಟಿ
‘ನಾನು ನಿವಿ ವೆರಿ ಗುಡ್ ಫ್ರೆಂಡ್ಸ್ ಆಗಿದ್ದೀವಿ. ಸದ್ಯಕ್ಕೆ ಮದುವೆ ವಿಚಾರದ ಬಗ್ಗೆ ಚಿಂತೆ ಇಲ್ಲ. ಆಕೆ ಇನ್ನೂ ಕಾಲೇಜಿಗೆ ಹೋಗ್ತಿದ್ದಾಳೆ. ನಂಗೂ ಬಿಡುವಿಲ್ಲದ ಪ್ರಾಜೆಕ್ಟ್ ಗಳಿವೆ. ನೋಡೋಣ,ಮದ್ವೆ ಟೈಮ್ ಬಂದಾಗ ಏನ್ ಆಗುತ್ತೋ? ತಂದೆ-ತಾಯಿ ಏನ್ ಹೇಳ್ತಾರೋ ನೋಡೋಣ. ಪರಸ್ಪರ ಇಬ್ಬರಿಗೂ ಇಷ್ಟ ಇದೆ. ಹಾಗಂತ ಈಗಲೇ ಡಿಸೈಡ್ ಮಾಡೋ ಸ್ಥಿತಿಯಲ್ಲಿ ನಾವಿಲ್ಲ’ ಎಂದಿದ್ದಾರೆ.
ಇದರೊಂದಿಗೆ ಚಂದನ್ ಮತ್ತು ನಿವೇದಿತಾ ಮದುವೆ ಆಗುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಸ್ಪಷ್ಟವಾಗಿದೆ.