ಸಿಹಿ ತಿನಿಸುಗಳಲ್ಲಿ ಅತ್ಯಂತ ಜನಪ್ರಿಯ ತಿನಿಸು ಮೈಸೂರು ಪಾಕ್. ಮೈಸೂರು ಪಾಕ್ ನಲ್ಲಿ ಮೈಸೂರು ಇದೆಯೇ? ಇಲ್ಲ..! ಹಾಗಾದ್ರೆ ಹೀಗೆಂದು ಹೆಸರು ಬರಲು ಕಾರಣ ಏನ್?
ನಾಲ್ಕನೆ ಕೃಷ್ಣರಾಜ ಒಡೆಯರ್ ಅವರ ಆಳ್ವೀಕೆ ಕಾಲದಲ್ಲಿ ಕಾಕಸೂರ ಮಾದಪ್ಪ ಎಂಬ ಬಾಣಸಿಗ ಇದ್ದನಂತೆ. ಆತ ಒಡೆಯರ್ ಅವರಿಗಾಗಿ ಮಾಡಿದ ವಿಶೇಷ ತಿನಿಸೇ ಈ ಮೈಸೂರು ಪಾಕ.
ಇದನ್ನು ತಿಂದು ಖುಷಿಗೊಂಡ ಒಡೆಯರ್, ‘ಇದರ ಹೆಸರೇನು? ಎಂದು ಮಾದಪ್ಪನನ್ನು ಕೇಳಿದರು. ಆಗ ಅವನಿಗೆ ಏನು ಹೇಳಬೇಕೆಂದು ತೋಚದೆ ತಡವರಿಸುತ್ತಲೇ ‘ಮೈಸೂರು ಪಾಕ’ ಎಂದನಂತೆ. ಅದನ್ನು ಉಚ್ಛರಿಸಿ, ಓಹೋ ನೀನು ಮಾಡಿದ ಈ ತಿಂಡಿ ಮೈಸೂರು ಪಾಕವೇ? ಚೆನ್ನಾಗಿದೆ ಚೆನ್ನಾಗಿದೆ ಎಂದು ಒಡೆಯರ್ ಮತ್ತೆರಡು ಪೀಸ್ ತಿಂದರಂತೆ. ಅವತ್ತಿಂದ ಮೈಸೂರು ಪಾಕ ಎಂಬ ತಿನಿಸು ಹುಟ್ಟಿಕೊಂಡಿದೆ…!