ನಾಳೆ ಶತಮಾನದ ಸುದೀರ್ಘ ಕೇತುಗ್ರಸ್ಥ ಚಂದ್ರಗ್ರಹಣವಿದೆ. ಬೆಂಗಳೂರಿನ ಖಗೋಳ ಪ್ರಿಯರಿಗೆ ನಿರಾಸೆ ….! ಏಕೆಂದರೆ, ಬೆಂಗಳೂರಿನ ಖಗೋಳ ಪ್ರಿಯರಿಗೆ ಚಂದ್ರಗ್ರಹಣ ನೋಡುವ ಸಾಧ್ಯತೆಗಳು ಕಡಿಮೆ ಇವೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಚಂದ್ರಗ್ರಹಣ ನೋಡಲು ಬೆಂಗಳೂರಿನ ನೆಹರು ತಾರಾಲಯದತ್ತ ಖಗೋಳ ಪ್ರಿಯರು ಆಗಮಿಸ್ತಾರೆ.
ಆದರೆ, ಮೋಡ ಕವಿದ ವಾತಾವರಣ ಇರುವುದರಿಂದ ಗ್ರಹಣ ಕಾಣಿಸುವುದು ಅನುಮಾನ.
ಬೆಂಗಳೂರಲ್ಲಿ ಮಳೆ ಇಲ್ಲದೇ ಇದ್ದರೂ ಮೋಡಕವಿದ ವಾತಾವರಣ ಇರಲಿದೆ. ಬೆಂಗಳೂರಲ್ಲಿ ಗ್ರಹಣ ಗೋಚರಿಸುವ ಸಾಧ್ಯತೆ ಕಡಿಮೆ ಎಂದು ಇಲಾಖೆ ಹೇಳಿದೆ. ಈ ಸುದ್ದಿ ಖಗೋಳ ಪ್ರಿಯರಲ್ಲಿ ಬೇಸರ ಮೂಡಿಸಿದೆ.