No menu items!
8.9 C
Munich
Thursday, May 7, 2026

ಆನ್ ಲೈನ್ ನಲ್ಲಿ ಆರ್ಡರ್ ಮಾಡಿ ತರಿಸಿದ ಹಾವೇ ಆಕೆಯ ಜೀವ ತೆಗೆಯಿತು…!

Must read

ಆನ್ ಲೈನ್ ನಲ್ಲಿ ಹಾವನ್ನು ಆರ್ಡರ್ ಮಾಡೋದ? ಇದು ನಿಜಕ್ಕೂ ಆಶ್ಚರ್ಯ ಅನಿಸುತ್ತೆ. ಆದರೆ, ನಂಬಲೇ ಬೇಕು..!

ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಹಾವೇ ಯುವತಿಯೊಬ್ಬಳ ಜೀವ ತೆಗೆದಿದೆ.
ಚೀನಾದಲ್ಲಿ ಈ ಘಟನೆ ನಡೆದಿರೋದು.
ಉತ್ತರ ಶಾಂಕ್ಸಿ ಪ್ರಾಂತ್ಯದ 21 ವರ್ಷ ಯುವತಿಯೊಬ್ಬಳು ಹಾವಿನ ವೈನ್ ತಯಾರಿಸಲು ಆನ್ ಲೈನ್ ಶಾಪಿಂಗ್ ಪೋರ್ಟಲ್ ನಿಂದ ‘ಮೆನಿ ಬ್ಯಾಂಡೆಡ್ ಕ್ರೇಯ್ಟ್’ ಎಂಬ ಜಾತಿಯ ವಿಷಕಾರಿ ಹಾವು ತರಿಸಿದ್ದಳು‌.

ಝುವಾನ್​​ಝುವಾನ್​ ಎಂಬ ಶಾಪಿಂಗ್​ ವೆಬ್​​ಸೈಟ್​​ನಲ್ಲಿ ಆಕೆ ಈ ಹಾವನ್ನು ಆರ್ಡರ್​​ ಮಾಡಿದ್ದಳು. ಗುವಾಂಗ್​​ಡಾಂಗ್ ಪ್ರದೇಶದಲ್ಲಿ ಈ ಹಾವು ಅಳಿವಿನಂಚಿನಲ್ಲಿದ್ದು, ಇಲ್ಲಿನ ವ್ಯಾಪಾರಿಯೇ ಈ ಹಾವನ್ನು ಮಾರಾಟ ಮಾಡಿದ್ದ. ಸ್ಥಳೀಯ ಕೊರಿಯರ್​ ಕಂಪನಿ ಹಾವನ್ನು ಡೆಲಿವರಿ ಮಾಡಿತ್ತು. ಆದ್ರೆ ಆಗ ಬಾಕ್ಸ್​​ನೊಳಗೆ ಏನಿತ್ತು ಅನ್ನೋದು ಗೊತ್ತಿರಲಿಲ್ಲ ಅಂತ ಡೆಲಿವರಿ ಮಾಡಿದವರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಕೊರಿಯರ್​​ನಲ್ಲಿ ಹಾವು ಬಂದ ನಂತರ ಅದು ಯುವತಿಗೆ ಕಚ್ಚಿದ್ದು, 8 ದಿನಗಳ ಬಳಿಕ ಆಕೆ ಸಾವನ್ನಪ್ಪಿದ್ದಾಳೆ. ಯುವತಿಗೆ ಕಚ್ಚಿದ ಬಳಿಕ ಹಾವು ಪರಾರಿಯಾಗಿತ್ತು. ಆದ್ರೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಯುವತಿಯ ಮನೆಯ ಬಳಿಯೇ ಹಾವನ್ನ ಪತ್ತೆಮಾಡಿದ್ದಾರೆ.

ಚೀನಾದಲ್ಲಿ ಸಾಂಪ್ರದಾಯಿಕವಾಗಿ ಇಡೀ ಹಾವನ್ನ ಮದ್ಯದಲ್ಲಿ ಹಾಕಿ ಇನ್​ಫ್ಯೂಸ್​ ಮಾಡಿ ವೈನ್ ತಯಾರಿಸಲಾಗುತ್ತದೆ. ಈ ವೈನ್​​ ಶಕ್ತಿ ಹೆಚ್ಚಿಸುತ್ತದೆ ಅಂತ ಹೇಳಲಾಗುತ್ತದೆ.

ಕಾಡು ಪ್ರಾಣಿಗಳನ್ನ ಆನ್​ಲೈನ್​ ತಾಣಗಳಲ್ಲಿ ಮಾರಾಟ ಮಾಡುವುದನ್ನು ಇಲ್ಲಿ ನಿಷೇಧಿಸಲಾಗಿದೆ.
ಆದ್ರೆ ಗ್ರಾಹಕರು ಝುವಾನ್​ಝುವಾನ್​ನಂತಹ ಸಣ್ಣ ತಾಣಗಳ ಮೊರೆ ಹೋಗ್ತಿದ್ದಾರೆ…!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article