ಕೆಲವರು ಹಾಗೇ, ನಮ್ಗೆ ಅವ್ರು ಗೊತ್ತು, ಇವ್ರು ಗೊತ್ತು…! ದೊಡ್ ದೊಡ್ ಅಧಿಕಾರಿಗಳ ಜೊತೆ ನಾನು ಚೆನ್ನಾಗಿದ್ದೇನೆ ಎಂದು ಬಿಲ್ಡಪ್ ತಗೋಳ ಅಭ್ಯಾಸ.
ಇದೇ ರೀತಿ ಒಬ್ಬ ಪೊಲೀಸರಿಗೆ ಹಾರ ಹಾಕಲು ಹೋಗಿ ಅವರ ಅತಿಥಿಯಾಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.
ಜಿಂಜನಾ ಪೊಲೀಸ್ ಠಾಣೆಗೆ ಹೊಸ ಸ್ಟೇಷನ್ ಆಫೀಸರ್ ಆಗಿ ರಾಜ್ ಕುಮಾರ್ ಶರ್ಮಾ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರ ಅಧಿಕಾರ ಸ್ವೀಕಾರದ ವೇಳೆ ಇತ್ವಾರಿ ಸಿಂಗ್ ಎಂಬುವವನೊಬ್ಬ, ‘ಸಾರ್ ನೀವು ಬಂದಿದ್ದು ತುಂಬಾ ಖುಷಿಯಾಯ್ತು’ ಎಂದು ಹಾರ ಹಾಕಲು ಮುಂದಾಗಿದ್ದಾನೆ..! ಅಷ್ಟರಲ್ಲೇ ಶರ್ಮಾ ಅವರು ಆ ವ್ಯಕ್ತಿಯನ್ನು ಒದ್ದು ಒಳಗಾಕಿ ಎಂದು ಸಿಬ್ಬಂದಿಗೆ ಸೂಚಿಸಿದ್ದಾರೆ.
ಇತ್ವಾರಿ ಸಿಂಗ್ ಶಾಮಿಲಿ ಜಿಲ್ಲೆ ಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ. ಆದರೆ ,ಇದನ್ನೆಲ್ಲಾ ಪೊಲೀಸರು ಮರೆತಿದ್ದಾರೆ ಎಂದು ತಿಳಿದು ಹೊಸ ಅಧಿಕಾರಿಯನ್ನು ಸ್ವಾಗತಿಸಲು ಬಂದಿದ್ದ…! ಈಗ ಪೊಲೀಸರ ಅತಿಥಿಯಾಗಿದ್ದಾನೆ.