No menu items!
16.4 C
Munich
Thursday, May 28, 2026

ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಿದ, ಕಂದಮ್ಮಗೆ ಜನ್ಮ ನೀಡಿ ಕಣ್ಮುಚ್ಚಿದಳು ತಾಯಿ…!

Must read

ಯೂ ಟ್ಯೂಬ್ ನಲ್ಲಿ ಸಲಹೆ ಪಡೆದು ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಹೆರಿಗೆ ಮಾಡಿಸಿದ್ದಾನೆ. ಪತ್ನಿ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದಾರೆ.

ಈ ಘಟನೆ ನಡೆದಿರೋದು ತಮಿಳುನಾಡಿನ ತಿರುಪ್ಪೂರು ಪಟ್ಟಣದಲ್ಲಿ.
ಕೃತಿಗಾ (28) ಮೃತೆ. ಕಾರ್ತಿಕೇನ್ ಎಂಬಾತ ಹೆರಿಗೆ ಮಾಡಿಸಿದ ಪತಿರಾಯ..!

ಇವರಿಬ್ಬರು ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ನಾರ್ಮಲ್ ಹೆರಿಗೆಯ ಮೇಲೆ ನಂಬಿಕೆ ಇಟ್ಟಿದ್ದರು. ಮನೆಯಲ್ಲಿಯೇ ಮಗುವನ್ನು ಹೊಂದಲು ನಿರ್ಧರಿಸಿದ್ದರು.


ಕೃತಿಕಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಕಾರ್ತಿಕೇಯನ್ ತನ್ನ ಕುಟುಂಬ ಸ್ನೇಹಿತರಾದ ಪ್ರವೀಣ್ ಕುಮಾರ್ ಮತ್ತು ಲಾವಣ್ಯ ದಂಪತಿ ಜೊತೆ ಸೇರಿ ಮನೆಯಲ್ಲೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಆಗ ಮೂವರು ಯೂಟ್ಯೂಬ್ ನಿಂದ ಹೆರಿಗೆ ಮಾಡಿಸಲು ಸಲಹೆಯನ್ನು ತೆಗೆದುಕೊಂಡಿದ್ದಾರೆ. ಅದೇ ರೀತಿ ಕೃತಿಗಾಗೆ ಹೆರಿಗೆ ಮಾಡಿಸಿದ್ದಾರೆ. ಕೊನೆಗೆ ಕೃತಗಾ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.
ಹೆರಿಗೆಯಾಗಿ ಒಂದು ಗಂಟೆಯ ನಂತರ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕೃತಿಗಾ ಅಷ್ಟರಲ್ಲಿಯೇ ಮೃತಪಟ್ಟಿದ್ದರು.
ಹೆರಿಗೆ ಸಮಯದಲ್ಲಿ ಕೃತಿಗಾಗೆ ತುಂಬಾ ರಕ್ತಸ್ರಾವವಾಗಿದ್ದು, ಜೊತೆಗೆ ಆಘಾತಕ್ಕೆ ಒಳಗಾದ ಕಾರಣ ಆಕೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸದ್ಯಕ್ಕೆ ಮಗು ಆರೋಗ್ಯವಾಗಿದೆ ಎಂದು ತಿರುಪ್ಪುರದ ಮುಖ್ಯ ಆರೋಗ್ಯ ಅಧಿಕಾರಿ ಕೆ. ಬೂಪತಿ ಹೇಳಿದ್ದಾರೆ.
ಈ ದಂಪತಿಗೆ ಈಗಾಗಲೇ ಒಂದು ಮಗುವಿದ್ದು, ಇದು ಎರಡನೇ ಮಗುವಾಗಿದೆ. ಇತ್ತೀಚೆಗಷ್ಟೆ ಇವರ ಅಜ್ಜ ಮೃತಪಟ್ಟಿದ್ದರು. ಮತ್ತೆ ಅವರೇ ಹುಟ್ಟಿ ಬರುತ್ತಾರೆ ಎಂದು ನಂಬಿಕೊಂಡಿದ್ದರು. ಅಷ್ಟೇ ಅಲ್ಲದೇ ಇವರು ನಾರ್ಮಲ್ ಹೆರಿಗೆಯನ್ನು ಅತಿ ಹೆಚ್ಚು ಪ್ರೋತ್ಸಾಹಿಸಿದ್ದರು. ಅದೇ ರೀತಿ ಕೃತಿಗಾ ಯಾವುದೇ ವೈದ್ಯರು ಅಥವಾ ಆಸ್ಪತ್ರೆಗೆ ಪರೀಕ್ಷೆಗಾಗಿ ಹೋಗಿರಲಿಲ್ಲ ಎಂದು ತನಿಖಾಧಿಕಾರಿ ಜೈಯಚಂದ್ರನ್ ತಿಳಿಸಿದ್ದಾರೆ.
ಸದ್ಯಕ್ಕೆ ಪತಿ ಕಾರ್ತಿಕೇಯನ್ ನನ್ನು ಪೊಲೀಸರು ಕಸ್ಟ್ ಡಿಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಹೆರಿಗೆಗೆ ಸಹಾಯ ಮಾಡಿದ ಪ್ರವೀಣ್ ದಂಪತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article