ರಾಜ್ ಕುಮಾರ್ ಇರಾನಿ ನಿರ್ದೇಶನದ, ರಣಬೀರ್ ಕಪೂರ್ ಅಭಿನಯದ ‘ಸಂಜು’ ಚಿತ್ರದ ವಿರುದ್ಧ ಭೂಗತ ಪಾತಕಿ ಅಬು ಸಲೇಂ ಲೀಗಲ್ ನೋಟಿಸ್ ನೀಡಿದ್ದಾನೆ.
ಸಿನಿಮಾದಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ದೃಶ್ಯದಲ್ಲಿ ಅಬುಸಲೇಂ ನನ್ನು ತೋರಿಸಿದ್ದಕ್ಕೆ ಅವನ ಪರ ವಕೀಲ ಸಿನಿಮಾ ನಿರ್ಮಾಣದ ಪ್ರಮುಖರಿಗೆ ನೋಟಿಸ್ ನೀಡಿದ್ದಾರೆ.
ತನ್ನ ಕಕ್ಷಿದಾರನ ಬಗ್ಗೆ ಸಿನಿಮಾದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿ ವಕೀಲ ರಾಜ್ ಕುಮಾರ್ ಇರಾನಿ, ವಿಧು ವಿನೋದ್ ಚೋಪ್ರಾ ಮತ್ತು ವಿತರಕರು, ನಿರ್ಮಾಪಕರಿಗೆ ನೋಟಿಸ್ ಕಳಿಸಿದ್ದಾರೆ.
ಮಾನಹಾನಿ ಉಂಟು ಮಾಡುವ ದೃಶ್ಯ ತೆಗೆದು 15ದಿನಗಳಲ್ಲಿ ಚಿತ್ರಕ್ಕೆ ಕತ್ತರಿ ಹಾಕದಿದ್ದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.