ರೆಹಮಾನ್ ಹಾಸನ್, ಯಸ್ ಅದೇ ಟಿವಿ9 ರೆಹಮಾನ್…! ಬಿಗ್ ಬಾಸ್ ಸೀಸನ್ 3ರಲ್ಲಿ ಭಾಗವಹಿಸಿದ ಬಳಿಕ ಸುದ್ದಿ ವಾಚನದಿಂದ ತಾತ್ಕಲಿಕ ಬ್ರೇಕ್ ತೆಗೆದುಕೊಂಡಿರೋ ಜನಪ್ರಿಯ ನಿರೂಪಕ.
ಬಿಗ್ ಬಾಸ್ ಬಳಿಕ ರೆಹಮಾನ್ ಸಿನಿಮಾ ರಂಗದಲ್ಲಿ ಬ್ಯುಸಿ ಆಗಿರುವ ಸುದ್ದಿ ಹಳೆಯದೇ..!
ಪುನೀತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ, ನಿಖಿಲ್ ಕುಮಾರ್ ನಟನೆಯ ಚೊಚ್ಚಲ ಸಿನಿಮಾ ‘ಜಾಗ್ವಾರ್’ ನಲ್ಲಿ ಕಾಣಿಸಿಕೊಂಡಿದ್ದ ರೆಹಮಾನ್ ಇತ್ತೀಚೆಗೆ ತೆರೆಕಂಡ ‘ವೆನಿಲ್ಲಾ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.
ಮುಂದೊಂದು ದಿನ ಮತ್ತೆ ಸುದ್ದಿ ಮಾಧ್ಯಮ ಲೋಕದಲ್ಲೇ ಶ್ರಮಿಸುವ ಬಯಕೆ ಇರುವ ರೆಹಮಾನ್ ಅವರೀಗ ಸ್ವಲ್ಪ ಸಮಯ ಸಿನಿಯಾನ ಮಾಡುವ ಗುರಿಯನ್ನಿಟ್ಟುಕೊಂಡಿದ್ದಾರೆ. ಇವರ ಸಿನಿ ಗುರಿ ತಲುಪಲು, ಈ ದಾರಿಯಲ್ಲಿ ಗೆಲ್ಲಲು ‘ಗರ’ ವರವಾದೀತೇ?
ಯಸ್, ರೆಹಮಾನ್ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ಗರ’ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿದೆ. ಗರ ಸಿನಿರಂಗದಲ್ಲಿ ಗಟ್ಟಿಯಾಗಿ ನೆಲೆನಿಲ್ಲಲು ರಹಮಾನ್ ಗೆ ವರವಾದೀತು.
ಇದು ನಿರ್ದೇಶಕ ಶಾಂತರಾಮ್ ಅವರ ಸಹೋದರ ಕೆ.ಆರ್ ಮುರುಳಿಕೃಷ್ಣ ನಿರ್ದೇಶನದ ಚೊಚ್ಚಲ ಚಿತ್ರ. ಇದುವರೆಗೆ ನಿರ್ಮಾಪಕರಾಗಿದ್ದ ಮುರುಳಿಕೃಷ್ಣ ಅವರು ಈ ಸಿನಿಮಾ ಮೂಲಕ ನಿರ್ದೇಶಕರಾಗ್ತಿದ್ದಾರೆ.
ಸಾಗರ್ ಗುರುರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಚ್ .ಸಿ ವೇಣು ಸಿನಿಮಾಟೋಗ್ರಫಿ ಹಾಗೂ ರವಿವರ್ಮ ಅವರ ಸಾಹಸದ ಬಲ ಚಿತ್ರಕ್ಕಿದೆ.
ಬಾಲಿವುಡ್ ನ ಹೆಸರಾಂತ ಹಾಸ್ಯ ನಟ ಜಾನಿ ಲೀವರ್ ‘ಗರ’ ಮೂಲಕ ಸ್ಯಾಂಡಲ್ ವುಡ್ ಗೆ ಬರ್ತಿದ್ದಾರೆ. ಸಾಧುಕೋಕಿಲಾ ಅವರ ಸಹೋದರನಾಗಿ ಜಾನಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಧು ಮತ್ತು ಜಾನಿ ಇಬ್ಬರಿಗೂ ಒಂದೇ ರೀತಿಯ ಕಾಸ್ಟ್ಯೂಮ್ ನೀಡಲಾಗಿದೆ…! ಕನ್ನಡ ಕಲಿತು ಸ್ವತಃ ಜಾನಿಲೀವರ್ ಅವರೇ ತಮ್ಮಪಾತ್ರದ ವಾಯ್ಸ್ ಡಬ್ ಮಾಡಿರುವುದು ವಿಶೇಷ..!
ರೆಹಮಾನ್ ಅಲ್ಲದೆ ಆರ್ಯನ್, ಅವಂತಿಕಾ ಮೋಹನ್ ಮತ್ತಿತರರು ನಟಿಸುತ್ತಿದ್ದಾರೆ. ಈ ಬಾರಿಯ ದಸರಾಕ್ಕೆ ಚಿತ್ರ ಬಿಡುಗಡೆ ಆಗುವುದು ಬಹುತೇಕ ನಿಶ್ಚಿತ. ಗರ ಬಗೆಗಿನದ ಕುತೂಹಲ ಗರಿಗೆದರಿದೆ ಕಾದು ನೋಡೋಣ..