ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವ ಪ್ರೇಮಿಗಳ ಮದುವೆ ಐಸಿಯುನಲ್ಲಿ ನಡೆದಿದೆ….! ಕುಟುಂಬಸ್ಥರೇ ಈ ಮದ್ವೆ ಮಾಡಿಸಿದ್ದಾರೆ.
ಘಟನೆ ನಡೆದಿರೋದು ಹರಿಯಾಣ ರಾಜ್ಯದ ಹಿಸ್ಸಾರಿ ನಗರದಲ್ಲಿ. ಗುರುಮುಖ್ ಸಿಂಗ್ (23) ಮತ್ತು ಕುಸುಮ (22) ಆಸ್ಪತ್ರೆಯಲ್ಲಿಯೇ ಸಾಂಸರಿಕ ಜೀವನಕ್ಕೆ ಕಾಲಿಟ್ಟವರು.
ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಮದುವೆಗೆ ವಿರೋಧ ವ್ಯಕ್ತವಾದ್ದರಿಂದ ನೊಂದು ಇಬ್ಬರೂ ಮೂರುದಿನಗಳ ಹಿಂದೆ ಸೈಬರ್ ಕೆಫೆಯೊಂದರಲ್ಲಿ ವಿಷ ಸೇವಿಸಿದ್ದರು. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರನ್ನೂ ಒಂದೇ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಕುಟುಂಬಸ್ಥರು, ವೈದ್ಯರು, ಸ್ನೇಹಿತರು ಸೇರಿ ಐಸಿಯುನಲ್ಲೇ ಮದ್ವೆ ಮಾಡಿಸಿದ್ದಾರೆ. ಯುವತಿಯ ಸ್ಥಿತಿ ಗಂಭೀರವಾಗಿದೆ. ಯುವಕ ಚೇತರಿಸಿಕೊಳ್ತಿದ್ದಾನೆ ಎಂದು ತಿಳಿದು ಬಂದಿದೆ.