ಕನ್ನಡದ ಅನೇಕ ನಟ-ನಟಿಯರು ಬಾಲಿವುಡ್ ಗೆ ಹೋಗಿ ಅದೃಷ್ಟಪರೀಕ್ಷೆ ಎದುರಿಸಿದ್ದಾರೆ. ಈಗ ನಿರ್ದೇಶಕರ ಸರದಿ.
ಕಿರಿಕ್ ಪಾರ್ಟಿ ನಿರ್ದೇಶಕ ರಿಶಬ್ ಶೆಟ್ಟಿ ಬಾಲಿವುಡ್ ಕಡೆ ಮುಖಮಾಡಿದ್ದಾರೆ. ಬಿಗ್ ಬಿ ಅಮಿತಾ ಬಚ್ಚನ್ ಅವರಗೆ ರಿಶಬ್ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಅಮಿತಾ ಬಚ್ಚನ್ ಅವರಿಗೆ ಒಪ್ಪುವ ಕಥೆಯೊಂದು ರಿಶಬ್ ಅವರ ಬಳಿ ಇದೆ. ಇತ್ತೀಚಿಗೆ ಮುಂಬೈಗೆ ಹೋಗಿ ಅಮಿತಾಬಚ್ಚನ್ ಅವರೊಡನೆ ಮಾತಾಡಿದ್ದಾರಂತೆ. ಕಥೆಯ ಆರಂಭದ ಭಾಗವನ್ನು ಕೇಳಿ ಬಿಗ್ ಬಿ ಖಷಿಪಟ್ಟಿದ್ದಾರಂತೆ. ಮಾತುಕತೆ ಆರಂಭದ ಹಂತದಲ್ಲಿದ್ದು, ಕಥೆ ವಿಸ್ತರಿಸಬೇಕಿದೆ.
ಈ ಚಿತ್ರಕ್ಕೆ ಅಭಿನಯ ಚಕ್ರವರ್ತಿ ಸುದೀಪ್ ಅವರನ್ನು ಸಹ ಕರೆತರಲು ಉತ್ಸುಕರಾಗಿರುವ ರಿಶಬ್ ಅವರೊಂದಿಗೆ ಮಾತುಕತೆ ಆಗಬೇಕಿದೆ ಎನ್ನುತ್ತಾರೆ.