96ನೇ ವಯಸ್ಸಲ್ಲಿ ಪರೀಕ್ಷೆ ಬರೆದ ಅಜ್ಜಿ…!

Date:

ಕೇರಳದ 96ವರ್ಷದ ಅಜ್ಜಿಯೊಬ್ಬರು ಮೂರನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಇದು ಅವರ ಜೀವನದಲ್ಲಿ ಬರೆದ ಮೊಟ್ಟಮೊದಲ ಪರೀಕ್ಷೆ ‌..! ಪ್ರಶ್ನೆ ಪತ್ರಿಕೆ ಯಲ್ಲಿ ತಾನು ಓದಿರೋ ಎಲ್ಲವನ್ನೂ ಕೇಳಿಲ್ಲ ಎಂದು ಈ ಅಜ್ಜಿ ಶಿಕ್ಷಕರ ಮೇಲೆ ಸಿಟ್ಟಾಗಿದ್ದಾರೆ.
ಈ ಅಜ್ಜಿಯ ಹೆಸರು ಕಾತ್ಯಾಯಿನಿ. ಇತರೆ ನಾಗರಿಕರು ಸಹ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದವರಲ್ಲಿ ಕಾತ್ಯಾಯಿನಿ ಅಜ್ಜಿಯೇ ಹಿರಿಯರು.
ಅಲಪ್ಬುಜ್ಹಾ ನಗರದ ಕಾನಿಚೆನೆಲ್ಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಭಾನುವಾರ ಪರೀಕ್ಷೆ ನಡೆದಿತ್ತು. ಅಜ್ಜಿಯ ಜೊತೆ 45 ಮಂದಿ ಪರೀಕ್ಷೆ ಬರೆದಿದ್ದಾರೆ.


ಇಂಗ್ಲಿಷ್ ಮೌಖಿಕ ಪರೀಕ್ಷೆಯಲ್ಲಿ ಶೇ.100ರಷ್ಟು ಅಂಕ ಪಡೆದುಕೊಂಡಿದ್ದೀನಿ.‌ ಉಳಿದ ವಿಷಯಗಳ ಫಲಿತಾಂಶ ಪ್ರಕಟವಾಗಿಲ್ಲ.‌ ಮುಂದಿನ ವರ್ಷ ನಾಲ್ಕನೇ ತರಗತಿ ಸೇರುತ್ತೇನೆ. ಗಣಿತ ಮತ್ತು ಇಂಗ್ಲಿಷ್ ಗಾಗಿ 6ತಿಂಗಳು ಟ್ಯೂಷನ್ ತೆಗೆದುಕೊಂಡಿದ್ದೆ ಎಂದು ಕಾತ್ಯಾಯಿನಿ ಹೇಳಿದ್ದಾರೆ.

ಕೇರಳ ರಾಜ್ಯ ಸರ್ಕಾರದ ‘ಅಕ್ಷರಲಕ್ಷಮ’ ಯೀಜನೆಯಡಿ ಈ ಪರೀಕ್ಷೆ ನಡೆದಿದೆ.‌ ಇಂಗ್ಲಿಷ್ ಮೌಖಿಕ, ಮಲೆಯಾಳಂ ಬರೆಯುವಿಕೆ, ಗಣಿತ ಹೀಗೆ 3 ವಿಷಯಗಳನ್ನು ಬರೆದಿದ್ದಾರೆ. ಪ್ರತಿ ವಿಷಯಕ್ಕೆ 30ಅಂಕಗಳಿಗೆ ಪರೀಕ್ಷೆ ನಡೆದಿತ್ತು.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..?

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..? ಚಳಿಗಾಲದಲ್ಲಿ ಹೃದಯ...

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...