ತಿರುಪತಿಯಲ್ಲಿ ನಾನಾ ವೈದಿಕ ಆಚರಣೆ ಹಮ್ಮಿಕೊಂಡಿರೋ ಹಿನ್ನೆಲೆಯಲ್ಲಿ
ಇಂದಿನಿಂದ 17 ರವರಗೆ 6 ದಿನಗಳ ಕಾಲ ತಿಮ್ಮನ ದರ್ಶನ ಭಾಗ್ಯವಿಲ್ಲ.
12 ವರ್ಷಕ್ಕೆ ಒಮ್ಮೆ ಅಷ್ಟಬಂಧನ ಬಾಲಲಯ ಮಹಾಸಂಪ್ರೋಕ್ಷಣಂ ವಿಶೇಷ ಪೂಜೆ ನಡೆಸಲಾಗುತ್ತದೆ. ಆದ್ದರಿಂದ ಈ ದಿನ ದರ್ಶನಕ್ಕೆ ಅವಕಾಶವಿಲ್ಲ.
ಪುರಾತನ ದೇವಾಲಯದ ಗರ್ಭಗುಡಿಯಲ್ಲಿ ಸಣ್ಣ ಪ್ರಮಾಣದ ದುರಸ್ತಿ ಕಾರ್ಯ ಸೇರಿದಂತೆ ಕಾಂಕ್ರೀಟ್ ಕಾಮಗಾರಿ ನಡೆಯಲಿದೆ. ವೈದಿಕ ಶ್ಲೋಕಗಳ ಪಠಣದ ಜೊತೆಗೆ ದೇವಸ್ಥಾನದ ಶುದ್ಧೀಕರಣ ಕಾರ್ಯ ನಡೆಯುತ್ತದೆ. ತಿರುಪತಿ ಬೆಟ್ಟದ 10ಕಿಲೋ ಮೀಟರ್ ಉದ್ದದ ಮೆಟ್ಟಿಲುಗಳ ಸಾಲು ಸೇರಿದಂತೆ ದೇವಾಲಯಕ್ಕೆ ಬರುವ ಎಲ್ಲಾ ಮಾರ್ಗಗಳಲ್ಲಿಯೂ ಭಕ್ತರಿಗೆ ಪ್ರಯಾಣ ನಿರ್ಬಂಧಿಸಲು ನಿರ್ಣಯಿಸಲಾಗಿದೆ.