ಬಿಗ್ ಬಾಸ್ ವಿನ್ನರ್ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅಭಿಮಾನಿಗಳಿಗಿದು ಸಿಹಿಸುದ್ದಿ. ಇವರ ಬಹುನಿರೀಕ್ಷಿತ ಆಲ್ಬಂ ಸಾಂಗ್ ‘ಫೈರ್’ ಆಗಸ್ಟ್ 24 ರಂದು ಬಿಡುಗಡೆಯಾಗಲಿದೆ.
ಸಿಂಗಪುರ್ ದಲ್ಲಿ ಕನ್ನಡಿಗರ ನಡುವೆ ‘ಫೈರ್’ ರಿಲೀಸ್ ಆಗುತ್ತಿದ್ದು, ಇದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕಂಪು ಪಸರಿಸಲಿದೆ.
ಅಂದಹಾಗೆ 24 ರಂದು ಬಿಡುಗಡೆ ಆಗುತ್ತಿರುವುದು ಫೈರ್ ನ ಲಿರಿಕಲ್ ವೀಡಿಯೋ ಸಾಂಗ್. ಒಂದು ತಿಂಗಳ ಬಳಿಕ ವೀಡಿಯೋ ಸಾಂಗ್ ಬಿಡುಗಡೆಯಾಗಲಿದೆ.
ಫೈರ್ ಸಾಂಗ್ ನಲ್ಲಿ ಅಂತಾರಾಷ್ಟ್ರೀಯ ಕಲಾವಿದರು ಸೇರಿದಂತೆ 500ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.
ಕನ್ನಡದ ಇಬ್ಬರು ಸ್ಟಾರ್ ನಟರು ಸಹ ಈ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ದರ್ಶನ್, ಯಶ್ ಅವರಲ್ಲಿ ಇಬ್ಬರು ನಟರಾದರೂ ಈ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಂದನ್ ಶೆಟ್ಟಿ ರ್ಯಾಪ್ ಸಾಂಗ್ ಗಳು ಸಾಕಷ್ಟು ಸದ್ದು ಮಾಡುತ್ತಿವೆ. ಜನ ಚಂದನ್ ಹಾಡಿಗೆ ಫಿದಾ ಆಗಿದ್ದಾರೆ. ಇವರ ಮೂರೇ ಮೂರು ಪೆಗ್ಗಿಗೆ ಹಾಡನ್ನಯ 40ಮಿಲಿಯನ್ ಮಂದಿ, ಟಕಿಲಾ ಹಾಡನ್ನು 36 ಮಿಲಿಯನ್ ಮಂದಿ ವೀಕ್ಷಿಸಿರುವುದನ್ನು ಇಲ್ಲಿ ಸ್ಮರಿಸಬಹುದು.