ಸಾಲು ಸಾಲು ಹಬ್ಬಗಳು ಬರುತ್ತಿವೆ. ಈ ನಡುವೆ ಚಿನ್ನ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ.
ಕಳೆದ ಮೂರು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಶನಿವಾರ ಮತ್ತೆ ಏರಿಕೆಯಾಗಿದೆ.
ಒಂದು ಗ್ರಾಂ ಚಿನ್ನದ ಬೆಲೆ 180 ರೂ ಏರಿಕೆಯಾಗಿದ್ದು, 10ಗ್ರಾಂ ಗೆ 30, 700ರೂ ತಲುಪಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆಯಾದರೂ ದೇಶಿಯ ವರ್ತಕರು ಖರೀದಿಗೆ ಮುಂದಾಗಿರುವುದೇ ಬೆಲೆ ಏರಕೆಗೆ ಕಾರಣ ಎಂದು ಹೇಳಲಾಗಿದೆ.
ಬೆಳ್ಳಿ ಬೆಲೆಯೂ ಸಹ 105ರೂ ಏರಿಕೆಯಾಗಿದ್ದು, ಕೆ.ಜಿಗೆ 39,000 ರೂ ತಲುಪಿದೆ.