ಕಿಕಿ ಡ್ಯಾನ್ ತಡೆಯಲು ಜಾಗೃತಿ ಮೂಡಿಸಲಾಗುತ್ತಿದೆ. ಪೊಲೀರ್ ಇದರ ತಡಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಬಿಗ್ ಬಾಸ್ ಖ್ಯಾತಿಯ ನಿವೇದಿತ ಗೌಡ ಕಿಕಿ ಡ್ಯಾನ್ಸ್ ಮಾಡಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಈಗ ಯುವತಿಯೊಬ್ಬಳು ಬೆಂಗಳೂರಿನ ಹೈಕೋರ್ಟ್ ಮುಂದೆಯೇ ಕಿಕಿ ಡ್ಯಾನ್ಸ್ ಮಾಡಿದ್ದಾರೆ. ಇದೀಗ ವೈರಲ್ ಆಗಿದೆ. ಭಾನುವಾರ ಹೈಕೋರ್ಟ್ ಬಳಿ ಹೋಗಿದ್ದ ಯುವತಿ ಯಾರು ಇಲ್ಲದ ವೇಳೆ ಕಾರಿನಿಂದ ಇಳಿದು ಡ್ಯಾನ್ಸ್ ಮಾಡಿದ್ದಾಳೆ. ಕಾರು ಚಲಿಸುತ್ತಿರುವಾಗ ಕಾರ್ ಹತ್ತಿದ್ದಾಳೆ. ಇದನ್ನು ಸ್ಥಳದಲ್ಲಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗ್ತಿದೆ. ಯುವತಿ ಯಾರು ಎಂಬುದು ತಿಳಿದುಬಂದಿಲ್ಲ.






