ನಾಲ್ವರು ಪಾದ್ರಿಗಳು ಗೃಹಿಣಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಕೇಳಿಬಂದಿದೆ.
ಕೇರಳದ ಧಾರ್ಮಿಕ ಸಿರಿಯಾನ್ ಚರ್ಚ್ ನ ನಾಲ್ವರು ಪಾದ್ರಿಗಳು ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು 34 ವರ್ಷದ ಗೃಹಿಣಿಯೊಬ್ಬರು ಕೇರಳದ ಕ್ರೈಂ ಬ್ರಾಂಚ್ ಗೆ ದೂರು ಸಲ್ಲಿಸಿದ್ದರು. ಆರೋಪಿಗಳಾದ ಸಿರಿಯಾನ್ ಚರ್ಚ್ ನ ಫಾದರ್ ಸೊನಿ ವರ್ಗೀಸ್, ಫಾದರ್ ಜೆಸ್ಸಿ ಕೆ ಜಾರ್ಜ್ ಸ್ಥಳೀಯ ಕೋರ್ಟ್ ಗೆ ಶರಣಾಗಿದ್ದಾರೆ. ಗೃಹಿಣಿ ಪತಿ ಚರ್ಚೆಗೆ ಪತ್ರಬರೆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.