ಮೊಬೈಲ್ ನಿಂದ ಮಾತಾಡ್ತಾ ಮಹಿಳೆ ಏಕಾಏಕಿ ಫ್ಲೈ ಓವರ್ ನಿಂದ ಕೆಳಗೆ ಬಿದ್ದ ಘಟನೆ ಬೆಂಗಳೂರಲ್ಲಿ ನಡೆದಿದೆ. 25 ವರ್ಷದ ಆರತಿ ಎಂಬ ಮಹಿಳೆ ಕೆಳಕ್ಕೆ ಬಿದ್ದವರು. ಈಕೆ ಮೇಖ್ರಿ ಸರ್ಕಲ್ ಫ್ಲೈ ಓವರ್ ಮೇಲೆ ಮೊಬೈಲ್ ನಲ್ಲಿ ಮಾತಾಡಿಕೊಂಡು ಹೋಗುವಾಗ ಕೆಳಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ಆಗಿಲ್ಲ. ಮಹಿಳೆ ಬಿದ್ದ ವೇಳೆ ಯಾವ ವಾಹನವೂ ಅಲ್ಲಿ ಓಡಾಡುತ್ತಿರಲಿಲ್ಲ ಒಂದು ವೇಳೆ ವಾಹನ ಯಾವುದಾದರೂ ಹರಿದಿದ್ದರೆ ಮಹಿಳೆ ಸ್ಥಿತಿ ಕಷ್ಟವಿರುತ್ತಿತ್ತು. ಘಟನೆಯಿಂದ ಮುಖಕ್ಕೆ ಗಾಯಗಳಾಗಿವೆ. ಹಲ್ಲುಗಳು ಉದುರಿವೆ.
ಸಾರ್ವಜನಿಕರು ಗಾಯಾಳುವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದಾಶಿವ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಾಳು ಮಹಿಳೆ ಗಳಿಗೆಗೆ ಒಂದು ಹೇಳಿಕೆ ನೀಡ್ತಿದ್ದಾರೆ ಎಂದು ತಿಳಿದುಬಂದಿದೆ.