ಲೋಕಸಭೆ ಚುನಾವಣೆ ಅವಧಿಗೆ ಮುಂಚೆಯೇ ನಡೆಯುತ್ತದೆಯೇ? ಎಂಬುದ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಹಾಕಿರುವ ಸವಾಲು…!
ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಲೋಕಸಭೆಯನ್ನು ವಿಸರ್ಜಿಸಿ ವರ್ಷಾಂತ್ಯದಲ್ಲಿ ನಡೆಯುವ ನಾಲ್ಕು ರಾಜ್ಯಗಳ ಚುನಾವಣೆಯೊಂದಿಗೆ ಲೋಕಸಭಾ ಚುನಾವಣೆಯನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಗೆ, ಕಾಂಗ್ರೆಸ್ ಸವಾಲೆಸೆದಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೊಟ್ ಅವರು, ಚುನಾವಣೆಗಳನ್ನು ಮುಂದೂಡುವುದು ಅಥವಾ ಹಿಂದೂಡಿ ಅವುಗಳನ್ನು 2019ರ ಲೋಕಸಭಾ ಚುನಾವಣೆಯೊಂದಿಗೆ ನಡೆಸುವುದು ಸಂವಿಧಾನ ಮತ್ತು ಕಾನೂನಿನಡಿಯಲ್ಲಿ ಅಸಾಧ್ಯ. ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಇರುವುದು ಒಂದೇ ಮಾರ್ಗ. ಪ್ರಧಾನಮಂತ್ರಿಗಳು ಲೋಕಸಭೆಯನ್ನು ವಿಸರ್ಜಲಿಸಿ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಜೊತೆಗ ಲೋಕಸಭಾ ಚುನಾವಣೆಯನ್ನು ನಡೆಸಬಹುದು ಎಂದು ಹೇಳಿದ್ದಾರೆ.