ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿ ಅನಿಲ ಟ್ಯಾಂಕರ್ ಪಲ್ಟಿ ಹೊಡೆದಿರುವ ಪರಿಣಾಮ ಶಿರಾಡಿ ಸಂಚಾರಕ್ಕೆ ಮತ್ತೊಂದು ಅಡ್ಡಿ ಎದುರಾಗಿದೆ.
ಗುಡ್ಡ ಕುಸಿತದಿಂದ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಕ್ಷಿಯಾಗಿದೆ. ಅನಿಲ ಸೋರಿಕೆ ಪರಿಣಾಮ ಶಿರಾಡಿ ಘಾಟ್ ಮಾರ್ಗಸ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಂಗಳೂರು ಕಡೆಯಿಂದ ಬಂದ ವಾಹನ ಸವಾರರು ರಾತ್ರಿ ಇಡೀ ಜಾಗರಣೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಘಟನೆ ವೇಳೆ ಟ್ಯಾಂಕರ್ ಪಲ್ಟಿ ನೋಡಲು ಹೋದ ವ್ಯಕ್ತಿಯೊಬ್ಬರು ದುರ್ಮರಣವನ್ನಪ್ಪಿದ್ದಾರೆ. ಮಂಗಳೂರು ಮೂಲದ ರಾಮದೇವ್ ಮೃತ. ಟ್ಯಾಂಕರ್ ನೋಡಲು ತೆರಳಿದ್ದಾಗ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಸದ್ಯ ಚಾರ್ಮುಡಿ ಘಾಟ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.