ಮಾಜಿ ಪ್ರಧಾನಿ , ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ದಾಖಲಿಸಿರುವ ಏಮ್ಸ್ ಆಸ್ಪತ್ರೆಗೆ ನಾಯಕರು ದೌಡಾಯಿಸಿದ್ದಾರೆ.
ವಾಜಪೇಯಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಜೀವರಕ್ಷಕ ಉಪಕರಗಳ ಮೂಲಕ ಜೀವ ಹಿಡಿದಿಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದೆ.
ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಮ್ಸ್ ಗೆ ಬರಲಿದ್ದಾರೆ. 11.30 ಕ್ಕೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡುತ್ತಾರೆ ಎಂದು ತಿಳಿದುಬಂದಿದ್ದು. ಆಘಾತಕಾರಿ ಸುದ್ದಿ ಬರುವ ಆತಂಕವಿದ್ದು, ದೇಶದೆಲ್ಲೆಡೆ ವಾಜಪೇಯಿ ಗುಣಮುಖರಾಗಲಿ ಎಂದು ಪ್ರಾರ್ಥಿಸಲಾಗುತ್ತಿದೆ.
ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ
Date: