No menu items!
4.9 C
Munich
Saturday, May 2, 2026

ಪಾತಳಕ್ಕೆ ಕುಸಿಯಿತು ರೂಪಾಯಿ ಮೌಲ್ಯ

Must read

ಭಾರತೀಯ ರೂಪಾಯಿ ಮೌಲ್ಯ ಮತ್ತೆ ಪಾತಾಳಕ್ಕೆ ಕುಸಿದಿದೆ. ಇದೇ ಮೊದಲು ಬಾರಿಗೆ ರೂಪಾಯಿ ಮೌಲ್ಯ ಪ್ರತಿ ಡಾಲರ್ ಗೆ 70.32 ರೂ ಗೆ ಕುಸಿತ ಕಂಡಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ ಮತ್ತೆ 43 ಪೈಸೆಯಷ್ಟು ದಿಢೀರ್ ಕುಸಿತ ಕಂಡಿದೆ. ಇದರೊಂದಿಗೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ಕುಸಿದಿದೆ.

ಇನ್ನು ಮಾರುಕಟ್ಟೆ ಪರಿಸ್ಥಿತಿಯನ್ನು ಕೇಂದ್ರ ವಿತ್ತ ಸಚಿವಾಲಯ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಮಾರುಕಟ್ಟೆ ಪರಿಸ್ಥಿತಿಯನ್ನು ಸಚಿವಾಲಯ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಹೂಡಿಕೆದಾರರು ಆತಂಕ ಪಡುವ ಅಗತ್ಯವಿಲ್ಲ. ಭಾರತೀಯ ಆರ್ಥಿಕತೆ ಸ್ಥಿರವಾಗಿದ್ದು, ಅಸ್ಥಿರವಾದ ಅಂತಾರಾಷ್ಟ್ರೀಯ ಆರ್ಥಿಕ ವಾತಾವರಣಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಅಂತೆಯೇ ಭಾರತದ ವಿದೇಶಿ ವಿನಿಮಯ ಖಜಾನೆಯಲ್ಲಿ ಸಾಕಷ್ಟು ಪ್ರಮಾಣದ ದಾಸ್ತಾನಿದ್ದು, ಆತಂಕ ಪಡಬೇಕಿಲ್ಲ. ಟರ್ಕಿಯಲ್ಲಿನ ಆರ್ಥಿಕ ಬಿಕ್ಕಟ್ಟು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಚ ಹಿನ್ನಡೆಗೆ ಕಾರಣವಾಗಿದೆ. ಹೀಗಾಗಿ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಜೇಟ್ಲಿ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article