ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ , ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ದಿ ವಿಲನ್ ‘ಚಿತ್ರೀಕರಣ ಆರಂಭಕ್ಕೂ ಮುನ್ನವೇ ಸದ್ದು ಮಾಡ್ತಾ ಬಂದಿದೆ.
ಪ್ರೇಮ್ ನಿರ್ದೇಶನದ ದಿ ವಿಲನ್ ಯಾವಾಗ ತೆರೆಗೆ ಬರ್ತಾನೆ ಅಂತ ಅಭಿಮಾನಿಗಳು ಕಾತುರದಿ ಕಾಯ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಎರಡೂ ಟೀಸರ್ ಗಳು ಹಾಗೂ ಹಾಡುಗಳು ಸಹ ಸಿಕ್ಕಾಪಟ್ಟೆ ದೂಳೆಬ್ಬಿಸಿವೆ.
ಇದೀಗ ದಿ ವಿಲನ್ ನ ಹಾಡೊಂದಕ್ಕೆ ಮೂವರು ಯುವತಿಯರು ಕಿಚ್ಚೆಬ್ಬಿಸುವ ಸ್ಟೆಪ್ ಹಾಕಿದ್ದಾರೆ….!
ತ್ವಿಶಾ ತೇಜು, ನಿರುಪಮಾ ಗೌಡ ಹಾಗೂ ಅನುಪಮಾ, ಈ ಮೂವರು ಯುವತಿಯರು ಮಾಡಿರು ಈ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಮೂವರು ಯುವತಿಯರು ಹೆಜ್ಜೆ ಹಾಕಿರುವ ಈ ಕವರ್ ಸಾಂಗ್ ಸಖತ್ತಾಗಿ ಮೂಡಿ ಬರಲು ಪ್ರದೀಪ್, ಶ್ರೇಯಸ್, ಅಶ್ವಥ್, ಮಂಜುನಾಥ್, ಅಜಿತ್ ರಾಯ್ , ನಂದಿ ಅವರನ್ನೊಳಗೊಂಡ ತಂಡದ ಶ್ರಮ ಸಹ ಇದೆ.
‘ಐ ಆ್ಯಮ್ ವಿಲನ್, ದೇಖೋ ಇಂಡಿಯನ್’ ಎಂಬ ಹಾಡಿಗೆ ಇವರು ಬಿಂದಾಸ್ ಸ್ಟೆಪ್ ಹಾಕಿದ್ದಾರೆ. ನಿರೂಪಮ ಗೌಡ ನೃತ್ಯ ಸಂಯೋಜನೆ ಮಾಡಿದ್ದಾರೆ.
ಎನ್ ಜಿ ಎಂಟರ್ಟೈನ್ಮೆಂಟ್ ನ ಎರಡನೇ ಕವರ್ ಸಾಂಗ್ ಇದು. ಈ ಹಿಂದೆ ಟಗರು ಸಿನಿಮಾದ ಥೀಮ್ ಸಾಂಗ್ ಗೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ರು. ಅದನ್ನು 1.9 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಶಿವಣ್ಣ ಸಹ ಈ ಡ್ಯಾನ್ಸ್ ನೋಡಿ ಖುಷಿಪಟ್ಟಿದ್ದರು.
ಈಗ ಮಚ್ಚುಗಿಚ್ಚು ಹಿಡಿಯದೇ ಸಖತ್ ಡ್ಯಾನ್ಸ್ ಮೂಲಕವೇ ಯುವತಿಯರು ಹವಾ ಇಟ್ಟಿದ್ದಾರೆ…ನೀವಿನ್ನೂ ಈ ವೀಡಿಯೋ ನೋಡಿಲ್ಲ ಅಂತಾದ್ರೆ ಇಲ್ಲಿದೆ ನೋಡಿ…