ಸೆಲಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಅನ್ನು ಮೀರಿಸುವಂತೆ ಕನ್ನಡ ಚಲನಚಿತ್ರ ಕಪ್ ಯಶಸ್ವಿಯಾಗಿದೆ ಎಂಬುದು ಅತಿಶಯೋಕ್ತಿಯಲ್ಲ. ಸೀಸನ್ 1 ರ ಬಳಿಕ ಇದೀಗ ಸೀಸನ್ 2 ಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಸಿನಿಮಾ ತಾರೆಯರ ಜೊತೆ ಅಂತರಾಷ್ಟ್ರೀಯ ಕ್ರಿಕೆಟಿಗರು ಸಹ ಆಗಲಿದ್ದಾರೆ.
ವಿಜಯ ನಗರ ಪೇಟ್ರಿಯಾಟ್ಸ್ ತಂಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಸ್ಟಾರ್ ಆಟಗಾರ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್ ಕ್ರಿಸ್ಟ್ ಈ ತಂಡದಲ್ಲಿರುವ ಪ್ರಮುಖ ಅಂತರಾಷ್ಟ್ರೀಯ ಆಟಗಾರರು.
ಕಿಚ್ಚ ಸುದೀಪ್ ಸ್ಟಾರ್ ಆಟಗಾರರಾಗಿರುವ ಕದಂಬ ಲಯನ್ಸ್ ತಂಡದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆಡಲಿದ್ದಾರೆ.
ಪವರ್ ಸ್ಟಾರ್ ಪುನೀತ್ ಅವರ ಗಂಗಾ ವಾರಿಯರ್ಸ್ ನಲ್ಲಿರುವ ಅಂತರಾಷ್ಟ್ರೀಯ ಕ್ರಿಕೆಟಿಗ ಲ್ಯಾನ್ಸ್ ಕ್ಲುಸ್ನೆರ್.
ಹೊಯ್ಸಳ ಈಗಲ್ಸ್ ತಂಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಲ್ಯಾನ್ಸ್ ಕ್ಲುಸ್ನೆರ್ ಇದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರಿರುವ ರಾಷ್ಟ್ರಕೂಟ ಪ್ಯಾಂಥರ್ಸ್ ನಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಓವೈಸ್ ಶಾ ಹಾಗೂ ಗಣೇಶ್ ಆಡಲಿರುವ ಒಡೆಯರ್ ಚಾರ್ಜರ್ಸ್ ತಂಡದಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಆಗಲಿದ್ದಾರೆ.

ಸೆಪ್ಟೆಂಬರ್ 8 ಮತ್ತು 9 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರು ಕೆಸಿಸಿ ಸೀಸನ್ 2 ಟಿಕೆಟ್ ಅನ್ನು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪಡೆಯಿರಿ.
http://in.ticketgenie.in/Sports/Kannada-Chalanachitra-Cup-2018






