1. ಆಸ್ಟ್ರೇಲಿಯಾಕ್ಕೆ ಭರ್ಜರಿ ಗೆಲುವು
5ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವನ್ನು ಮಣಿಸುವ ಮೂಲಕ ಆತಿಥೇಯ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದೆ. ಇದರೊಂದಿಗೆ ರೋಹಿತ್ ಶತಕ ವ್ಯರ್ಥವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ಆರಂಭಿಕ ಆಟಗಾರ ರೋಹಿತ್ ಶರ್ಮಾರ ಅಜೇಯ 171ರನ್ ಹಾಗೂ ವಿರಾಟ್ ಕೋಹ್ಲಿಯ 91ರನ್ಗಳ ಆಟದ ನೆರವಿನಿಂದ 309ರನ್ ಗಳಿಸಿತ್ತು.
ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಚೊಚ್ಚಲ ಪಂದ್ಯವನ್ನಾಡುತ್ತಿರುವ ಪಂಜಾಬಿನ ಎಡಗೈ ವೇಗಿ ಬರೀಂದರ್ ಸಿಂಗ್ ಸ್ರಾನ್ ಆಘಾತ ನೀಡಿದರು. 8 ರನ್ ಗಳಿಸಿ ಆಡುತ್ತಿದ್ದ ಪಿಂಚ್ ಬರೀಂದರ್ ಅವರ ಎಸತದಲ್ಲಿ ಅವರಿಗೇ ಕ್ಯಾಚ್ ನೀಡಿ ಫೆವಿಲಿಯನ್ನತ್ತ ಹಿಂತಿರುಗಿದರು. ಬರೀಂದರ್ ಸಿಂಗ್ ರ ಮೂರನೇ ಓವರ್ನಲ್ಲಿ ವಾರ್ನರ್ ಕೋಹ್ಲಿಗೆ ಕ್ಯಾಚ್ ನೀಡಿ ಫೆವಿಲಿಯನ್ಗೆ ಮರಳಿದರು.
21ರನ್ ಗಳಿಗೆ 2 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿದ್ದ ಆಸೀಸ್ಗೆ ನಾಯಕ ಸ್ಮಿತ್ ಮತ್ತು ಬೈಲಿ ಆಸರೆಯಾದರು. ಸ್ಮಿತ್ 149ರನ್, ಬೈಲಿಯ 112ರನ್ ಗಳ ನೆರವಿನಿಂದ ಆಸೀಸ್ ಇನ್ನೂ 4 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ಗಳ ಗೆಲುವನ್ನು ಪಡೆಯಿತು.
2.ಕಚ್ಚಾ ಈರುಳ್ಳಿ ಬಳಸಿ ಒಬಾಮ ಕಣ್ಣೀರಿಕಿದ್ದರು..!
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಬಂದೂಕು ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 2012ರಲ್ಲಿ ಸ್ಯಾಂಡಿ ಹುಕ್ ಶಾಲೆಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ 20 ಮಕ್ಕಳು ಸಾವನ್ನಪ್ಪಿದ ಘಟನೆಯನ್ನು ನೆನೆಯುತ್ತಾ ಅತ್ತಿದ್ದು ಈಗ ಹಳೇ ಸುದ್ದಿ..! ಹೊಸ ವಿಷಯ ಏನಪ್ಪ ಅಂದ್ರೆ ಅವತ್ತು ಕಣ್ಣೀರಾಕಲು ಒಬಾಮ ಕಚ್ಚಾ ಈರುಳ್ಳಿಯನ್ನು ಬಳಸಿದ್ದರಂತೆ..!
ಜನವರಿ 5ರಂದು ಶ್ವೇತಭವನದಲ್ಲಿ ಬಂದೂಕು ನಿಯಂತ್ರಣ ಕ್ರಮಗಳು ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಒಬಾಮ ಸಹಜವಾಗಿ ಅತ್ತಿಲ್ಲ..! ಅವರು ಈರುಳ್ಳಿ ಬಳಸಿ ಕೃತಕವಾಗಿ ಅತ್ತಿದ್ದಾರೆಂದು ಅಮೆರಿಕಾದ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಈ ಕುರಿತು ಚಾನೆಲ್ ನಿರೂಪಕಿ ಚರ್ಚಿಸುವಾಗ, ನಾಯಕರ ಕಣ್ಣೀರನ್ನು ನಂಬದಿರಿ ಎಂದು ಹೇಳುವುದರ ಜೊತೆಗೆ ಕಣ್ಣೀರು ಬರಿಸಿಕೊಳ್ಳಲು ಒಬಾಮ ಈರುಳ್ಳಿ ಅಥವಾ ಯಾವ ವಸ್ತುವನ್ನು ಬಳಸಿದ್ದರೆಂಬುದನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.
https://www.youtube.com/watch?v=NP8LSxxpPZU
3. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ; ಜಾರಿಗೆ ಬಂತು, ಬರಲಿಲ್ಲ..!?
ಹಿಂಬದಿ ಸವಾರಿಗೂ ಹೆಲ್ಮೆಟ್ ಕಡ್ಡಾಯ ಎಂಬ ನಿಯಮವನ್ನು ರಾಜ್ಯ ಸರ್ಕಾರ ಇಂದಿನಿಂದ ಕಡ್ಡಾಯವಾಗಿ ಜಾರಿಗೆ ತಂದಿದೆ..! ಹೀಗೆಂಬ ಸುದ್ದಿಯನ್ನು ನಾವು ಕೇಳಿದ್ದೇವೆ..! ಆದರೆ ನಿಜಕ್ಕೂ ಪ್ರಾಯೋಗಿಕವಾಗಿ ಈ ನಿಯಮ ಇವತ್ತನಿಂದ ಜಾರಿಗೆ ಬಂದಿದೆಯೇ..? ಇದನ್ನು ಯಾರೂ ಬಿಡಿಸಿ ಹೇಳ ಬೇಕಿಲ್ಲ..! ಯಾರೂ ರಾಜ್ಯ ಸರ್ಕಾರದ ಮಾತಿಗೆ ಬಿಡಿಗಾಸು ಮರ್ಯಾದೆ ಕೊಟ್ಟಿಲ್ಲ..! ಸರ್ಕಾರ ಯೋಜನೆಗಳನ್ನು ಅದರ ಪಾಡಿಗೆ ಅದು ಜಾರಿಗೆ ತರುತ್ತೆ..! ನಮಗೂ ಸರ್ಕಾರದ ಯೋಜನೆಗಳಿಗೂ ಯಾವುದೇ ಸಂಬಂಧವಿಲ್ಲ ಅನ್ನೋದನ್ನು ಹೆಲ್ಮೆಟ್ ನಿಯಮ ಮತ್ತೆ ಹೈಲೇಟ್ ಮಾಡಿದೆ..!
ಹೌದು ರಾಜ್ಯ ಸರ್ಕಾರ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂಬ ನಿಯಮವನ್ನು ಇವತ್ತಿನಿಂದ ಜಾರಿಗೆ ತಂದಿದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆರಂಭದಲ್ಲಿ ಸವಾರರಿಗೆ ತೊಂದರೆ ಆಗಬಾರದೆಂದು ಈ ನಿಯಮವನ್ನು ಕೆಲವು ದಿನಗಳವರೆಗೆ ಸಡಿಸಲ ಗೊಳಿಸಿರಬಹುದು..! ಹೆಲ್ಮೆಟ್ ಧರಿಸದೇ ಇದ್ದರೆ ಎಚ್ಚರಿಸಿ ಕಳುಹಿಸುತ್ತಿರ ಬಹುದು..! ಆದರೆ ನಿಯಮ ಜಾರಿಗೆ ಬಂದ ದಿನವೇ ನಿಯಮವನ್ನು ಲೆಕ್ಕಿಸದೇ ಬೈಕ್ ಸವಾರಿ ಮಾಡುತ್ತಿರುವುದು ಕಣ್ಣಿಗೆ ಕಾಣ್ತಾ ಇದೆ..! ಇದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ. ಎಲ್ಲೋ ಒಬ್ಬರು-ಇಬ್ಬರು ಹಿಂಬದಿ ಸವಾರರು ಹೆಲ್ಮೆಟ್ ಧರಿಸಿರುವುದನ್ನು ಕಂಡಿದ್ದೇವೆಯೇ ಹೊರತು ಬಹುತೇಕರು ಹೆಲ್ಮೆಟ್ ಧರಿಸಿಲ್ಲ..! ಹಿಂಬದಿ ಸವಾರರ ಕಥೆ ಬಿಟ್ಟಾಕಿ, ಕೆಲವು ಬೈಕ್ ಓಡಿಸುವವರೇ ಹೆಲ್ಮೆಟ್ ಧರಿಸದೇ ಇರೋದನ್ನು ನಾವು ಕಂಡಿದ್ದೇವೆ..!
ಈ ಸಂಬಂಧ ಜನಾಭಿಪ್ರಾಯ ಸಂಗ್ರಹಿಸ ಹೊರಟರೆ ಎಲ್ಲರೂ ಸಾಮಾನ್ಯವಾಗಿ ಸರ್ಕಾರದ ನಿಯಮವನ್ನು ವಿರೋಧಿಸಿದ್ದಾರೆ. ಸರ್ಕಾರ ಮೊದಲು ರಸ್ತೆ ಸರಿ ಪಡಿಸಲಿ ಎಂದು ಸರ್ಕಾರದ ನೀತಿಯನ್ನು ಹೀಗಳೆದಿದ್ದಾರೆ.
4. ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫೆ.13ಕ್ಕೆ
ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದೆ. ಫೆಬ್ರವರಿ 13ರಂದು ಮತದಾನ ನಡೆಯಲಿದೆ.
ಬೆಂಗಳೂರಿನ ಹೆಬ್ಬಾಳ ಶಾಸಕ ಆರ್.ಜಗದೀಶ್ ಕುಮಾರ್, ಬೀದರ್ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಮತ್ತು ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕ ಎ.ವೆಂಕಟೇಶ್ ನಾಯಕರ ನಿಧನದಿಂದ ತೆರವಾಗಿದ್ದ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
5. ಉಪಲೋಕಾಯುಕ್ತ ವಿರುದ್ಧ ಶೀಘ್ರದಲ್ಲೇ ದಾಖಲೆ ಸಲ್ಲಿಕೆ
ಉಪಲೋಕಾಯುಕ್ತ ನ್ಯಾ. ಸುಭಾಷ್ ಅಡಿ ಪದಚ್ಯುತಿ ಪ್ರಸ್ತಾಪವನ್ನು ಇನ್ನೊಂದು ವಾರದೊಳಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಸಲ್ಲಿಸುವುದಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಇದರೊಂದಿಗೆ ಅಡಿ ಅವರ ಪ್ರಸ್ತಾಪ ಸ್ವೀಕೃತವಾಗಿಲ್ಲ, ಅಂಗೀಕಾರವಾಗಿಲ್ಲ ಎಂಬ ಗೊಂದಲಗಳಿಗೆ ತಿಮ್ಮಪ್ಪನವರು ತೆರೆ ಎಳಿದಿದ್ದಾರೆ.
6. ಜಲ್ಲಿ ಕಟ್ಟಿಗೆ ಸುಪ್ರೀಂ ಬ್ರೇಕ್ :
ತಮಿಳುನಾಡಿನ ಜನಪ್ರಿಯ ಆಟ ಜಲ್ಲಿಕಟ್ಟಿನ ಮೇಲೆ ಹೇರಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದಕ್ಕೆ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ.
ಸಂಕ್ರಾಂತಿ ಹಬ್ಬದ ಆಚರಣೆಗಾಗಿ ಕೇಂದ್ರ ಸರ್ಕಾರ ಜನವರಿ 8ರಂದು ಜಲ್ಲಿಕಟ್ಟಿನ ಮೇಲೆ ನಿಷೇಧವನ್ನು ಹಿಂಪಡೆದಿತ್ತು. ಇದನ್ನು ಪ್ರಶ್ನಿಸಿ ಪ್ರಾಣಿ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಅರ್ಜಿಯ ವಿಚಾರಣೆಯನ್ನು ನಡೆಸಿದ ಕೋರ್ಟ್ ನಿಷೇಧ ಆದೇಶಕ್ಕೆ ತಡೆಯೊಡ್ಡಿದೆ.
7. ಮದುವೆಗೆ ಒಪ್ಪದ ಯುವಕನ ಮೇಲೆ ಯುವತಿಯೇ ಆ್ಯಸಿಡ್ ಸುರಿದಳು..!
ತಾನು ಪ್ರೀತಿಸಿದ ಹುಡುಗ ಇನ್ನೊಬ್ಬಳನ್ನು ಮದುವೆಯಾಗಲು ಮುಂದಾದನೆಂದು ಭಗ್ನ ಪ್ರೇಮಿಯೊಬ್ಬಳು ಮೋಸ ಮಾಡಿದ ಹುಡುಗನ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ಇನಾಮ್ ಪುರ ಎಂಬಲ್ಲಿ ನಡೆದಿದೆ.
21 ವರ್ಷದ ಸೂರಜ್ 19 ವರ್ಷದ ಆಫ್ರಿನ್ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಸೂರಜ್ ಬೇರೊಬ್ಬಳನ್ನು ಮದುವೆಯಾಗಲು ಮುಂದಾದ್ದರಿಂದ ನೊಂದ ಆಫ್ರಿನ್ ಆತನ ಮೇಲೆ ಆ್ಯಸಿಡ್ ಸುರಿದಿದ್ದಾಳೆ.
ಸೂರಜ್ನ ಮುಖ ಮತ್ತು ಮೈಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
8. ಇಸ್ತಾಂಬುಲ್ನಲ್ಲಿ ಆತ್ಮಾಹುತಿ ಬಾಂಬ್ ದಾಳಿ; 10ಕ್ಕೂ ಹೆಚ್ಚು ಜನರ ಸಾವು
ಇಸ್ತಾಂಬುಲ್ನ ಐತಿಹಾಸಿಕ ಪ್ರವಾಸಿ ತಾಣವಾದ ಸುಲ್ತಾನ್ ಮೇಟ್ ಸ್ಕೋರ್ ಅನ್ನು ಗುರಿಯಾಗಿರಿಸಿಕೊಂಡು ಆತ್ಮಹುತಿ ಬಾಂಬ್ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆಂದು ಗವರ್ನರ್ ಕಚೇರಿ ಮೂಲಗಳು ತಿಳಿಸಿರುವುದಾಗಿ ಟರ್ಕಿಯ ಹಾಬೆರ್ ಟೆಲಿವಿಷನ್ ವರದಿ ಮಾಡಿದೆ.
9. ಸಮ-ಬೆಸ ಯಶಸ್ವಿ; ಜನರ ಗುಣಗಾನ ಮಾಡಿದ ಕೇಜ್ರಿವಾಲ್
ದೇಶದ ರಾಜಧಾನಿ ದೆಹಲಿಯಲ್ಲಿ ವಾಯಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ 15 ದಿನದ ಮಟ್ಟಿಗೆ ಇದೇ ಜನವರಿ1ರಿಂದ ಬೆಳಿಗ್ಗೆ 8ಗಂಟೆಯಿಂದ ರಾತ್ರಿ 8ರ ವರೆಗೆ ಜಾರಿಗೆ ತರಲಾಗಿರುವ ಸಮ-ಬೆಸ ವಾಹನ ಸಂಚಾರ ನಿಯಮ ಯಶಸ್ವಿಯಾಗಿದ್ದಕ್ಕೆ ಕೇಜ್ರಿವಾಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಆಂಗ್ಲ ದೈನಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ದಿಲ್ಲಿಗರ ಅಭೂತಪೂರ್ವ ಉತ್ಸಾಹ ಮತ್ತು ಬೆಂಬಲದಿಂದಾಗಿ ಸಮ-ಬೆಸ ಯಶಸ್ವಿಯಾಗಿದೆ ಎಂದು ಕೇಜ್ರಿವಾಲ್ ಹರ್ಷ ವ್ಯಕ್ತಪಡಿಸಿದ್ದಾರೆ.
10. ನೀರು ಬಿಟ್ಟು ಸಮುದ್ರ ತೀರಕ್ಕೆ ಬಂದ ತಿಮಿಂಗಿಲಗಳು..!
ತಮಿಳು ನಾಡಿನ ಟುಟಿಕೊರಿನ್ ಸಮುದ್ರ ತೀರಕ್ಕೆ ನೂರಕ್ಕೂ ಅಧಿಕ ತಿಮಿಂಗಿಲಗಳು ನೀರು ಬಿಟ್ಟು ಬರುತ್ತಿವೆ..!
ಕಳೆದ ರಾತ್ರಿಯಿಂದಲೂ ತಿಮಿಂಗಿಲಗಳು ನೀರು ಬಿಟ್ಟು ದಡಕ್ಕೆ ಬರುತ್ತಿದ್ದು, ಅಧಿಕಾರಿಗಳು ಮತ್ತು ಮೀನುಗಾರರು ಮತ್ತೆ ಸಮದ್ರಕ್ಕೆ ಅವುಗಳನ್ನು ಸೇರಿಸಿದ್ದರೂ ಪದೇ ಪದೇ ದಡಕ್ಕೇ ಬರುತ್ತಿವೆ ಎಂದು ತಿಳಿದು ಬಂದಿದೆ.
ಚೆನ್ನೈನಿಂದ ಸುಮಾರು 600 ಕಿಮೀ ದೂರದಲ್ಲಿರುವ ಸಮುದ್ರ ಇದಾಗಿದ್ದು, ಇಲ್ಲಿರುವ ಸಣ್ಣ ರೆಕ್ಕೆಯ ತಿಮಿಂಗಿಲಗಳು ಹಾದಿತಪ್ಪಿ ದಡಕ್ಕೆ ಬಂದಿರ ಬಹುದೆಂದು ಹೇಳಲಾಗುತ್ತಿದೆ. ಇದೇ ಮೊದಲ ಬಾರಿಗೆ ಹೀಗೆ ತಿಮಿಂಗಿಲಗಳು ತೀರಕ್ಕೆ ಬರುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಅರಣ್ಯ ಇಲಾಖೆ ಮತ್ತು ಮನ್ನಾರ್ ಮರೀನ್ ಪಾರ್ಕ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗೂ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
https://www.youtube.com/watch?v=aMigRphV8a0