ಸಂತ್ರಸ್ತರ ನೆರವಿಗೆ ಸ್ಯಾಂಡಲ್ ವುಡ್ ಕರೆ

Must read

ಕೊಡಗು ಮತ್ತು ಕರಾವಳಿ ಜಿಲ್ಲೆಗಳು ವರುಣನ ಆರ್ಭಟಕ್ಕೆ ತತ್ತರಿಸಿವೆ. ಸಂತ್ರಸ್ತರ ನೆರವಿಗೆ ಧಾವಿಸುವಂತೆ ಸ್ಯಾಂಡಲ್ ವುಡ್ ಸ್ಟಾರ್ ನಟರು ಅಭಿಮಾನಿಗಳಲ್ಲಿ‌ ಮನವಿ ಮಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಾಲೆಂಜ್ ಸ್ಟಾರ್ ದರ್ಶನ್ , ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಂತ್ರಸ್ತ ನೆರವಿಗೆ ಕೈ‌ಜೋಡಿಸುವಂತೆ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

ಮಳೆ ಸಂತ್ರಸ್ತರಿಗೆ ಸ್ಪಂದಿಸಿದರೆ ಅದೇ ನೀವು ನನಗೆ ನೀಡಬಹುದಾದ ದೊಡ್ಡ ಕೊಡುಗೆ. ಇವರು ನಮ್ಮವರೇ ದಯಮಾಡಿ ಸಹಾಯ ಮಾಡಿ. ನಮ್ಮ ಕೈಲಾದ ಸಹಾಯ ಮಾಡೋಣ . ಸರಕಾರ ಸಹ ಸಂತ್ರಸ್ತರಿಗೆ ನೆರವಾಗಬೇಕು ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.
ಇದೇ ರೀತಿ ದರ್ಶನ್ ಮತ್ತು ಶಿವಣ್ಣ ಸಹ ಹೇಳಿದ್ದಾರೆ.

- Advertisement -spot_img

More articles

- Advertisement -spot_img

Latest article