ಇಂಗ್ಲೆಂಡ್ ವಿರುದ್ಧದ ಅಂತಿಮ 2 ಟೆಸ್ಟ್ ಪಂದ್ಯಗಳಿಗೆ ಆರಂಭಿಕ ಆಟಗಾರ ಮುರುಳಿ ವಿಜಯ್ ಮತ್ತು ಕುಲದೀಪ್ ಯಾದವ್ ಗೆ ಕೋಕ್ ನೀಡಿ, ಪೃಥ್ವಿ ಶಾ ಮತ್ತು ಹನುಮ ವಿಹಾರಿಗೆ ಮಣೆ ಹಾಕಲಾಗುತ್ತಿದೆ.
18ವರ್ಷದ ಪೃಥ್ವಿ ಶಾ ಹಾಗೂ 24ವರ್ಷದ ಹನುಮ ವಿಹಾರಿ ಅವರ ಆಯ್ಕೆಯನ್ನು ಬಿಸಿಸಿಐ ಖಚಿತಪಡಿಸಿದೆ. ಪೃಥ್ವಿ ಶಾ ಅಂಡರ್ 19ಟೀಂ ಇಂಡಿಯಾದ ನಾಯಕನಾಗಿ ವಿಶ್ವಕಪ್ ತಂದುಕೊಟ್ಟ ಹೆಗ್ಗಳಿಕೆ ಹೊಂದಿರುವ ಯುವ ಆಟಗಾರ. ದ್ರಾವಿಡ್ ಗರಡಿಯಲ್ಲಿ ಪಳಗಿದ ಆಟಗಾರ ಪೃಥ್ವಿ ಶಾ, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಶೇ. 56.72 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 7 ಶತಕ , 5 ಅರ್ಧಶತಕಗಳಿಸಿ ಮಿಂಚಿದ್ದಾರೆ.
ವಿಹಾರಿ ಟೀಂ ಇಂಡಿಯಾ ಎ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ದಕ್ಷಿಣಾ ಆಫ್ರಿಕಾ ವಿರುದ್ಧ ಇತ್ತೀಚೆಗೆ ನಡೆದ ಪಂದ್ಯದಲ್ಲಿ 148ರನ್ ಸಿಡಿಸಿದ್ದರು. ಸದ್ಯ ಆಂಧ್ರಪ್ರದೇಶ ರಣಜಿ ತಂಡದ ನಾಯಕನಾಗಿದ್ದಾರೆ.