ಸಾವಿರಾರು ಕೋಟಿ ರೂ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಸೆರೆವಾಸದ ಕಾಲ ಸನಿಹವಾಗುತ್ತಿದೆ.ಅವರಿಗಾಗಿ ವಿಶೇಷ ಸೆಲ್ ಕೂಡ ನಿರ್ಮಾಣವಾಗಿದೆ…! ಕೋರ್ಟ್ ಕೋರಿಕೆಯಂತೆ ಮಲ್ಯ ಇರಬೇಕಾದ ಇಂಡಿಯನ್ ಜೈಲಿನ ವೀಡಿಯೋ ಲಂಡನ್ ತಲುಪಿದೆ. ಯುಕೆ ನ್ಯಾಯಾಲಯದಲ್ಲಿ ಅಂತಿಮ ಹಂತದ ವಿಚಾರಣೆ ನಡೆಯುತ್ತಿದೆ. ನಾನು ಜೈಲಿನಲ್ಲಿದ್ರೂ ವಿಐಪಿ ಜೈಲು ಬೇಕು ಅಂತ ಮಲ್ಯಾ ಡಿಮ್ಯಾಂಡ್ ಮಾಡಿದ್ರು. ಜೊತೆಗೆ ಭಾರತದಲ್ಲಿನ ಜೈಲುಗಳ ಬಗ್ಗೆ ಮೂಗು ಮುರಿದಿದ್ರು.
ಈಗ ಯುಕೆ ನ್ಯಾಯಾಲಯ ಭಾರತದ ಜೈಲಿನ ಸ್ಥಿತಿ ಕುರಿತು ವರದಿ ನೀಡುವಂತೆ ಕೇಳಿಕೊಂಡಿತ್ತು. ಮುಂಬೈನ ಅರ್ಥೂರ್ ಜೈಲಿನ ವೀಡಿಯೋವನ್ನೀಗ ಲಂಡನ್ ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯಕ್ಕೆ ಕಳುಹಿಸಿಕೊಡಲಾಗಿದೆ.
ವಿಶೇಷ ಸೆಲ್ ರೆಡಿ ಮಾಡಲಾಗಿದೆ. ಟಿವಿ, ವೈಯಕ್ತಿಕ ಶೌಚಾಲಯ, ಹಾಸಿಗೆ , ಬಾತ್ ರೂಂ, ಸೂರ್ಯನ ಬೆಳಕು ಬೀಳುವಂತಾ ವರಾಂಡಾ, ಲೈಬ್ರಿ ಮತ್ತು ವೈದ್ಯಕೀಯ ಸೌಲಭ್ಯ ಸಹ ನೀಡಲಾಗಿದೆ. ಸಿಸಿಟಿವಿ ಸಹ ಅಳವಡಿಸಲಾಗಿದೆ.