ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾ ಭಸ್ಮವನ್ನು ವಿಸರ್ಜಿಸುವಾಗ ಅವಘಡವೊಂದು ಸಂಭವಿಸಿದೆ.
ಲಖನೌನ ಕೆಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಆಕಸ್ಮಿಕವಾಗಿ ನದಿಗೆ ಬಿದ್ದಿದ್ದಾರೆ.
ಅಟಲ್ ಜೀ ಅವರ ಚೀತಾ ಭಸ್ಮ ಬಿಡಲು ಇವರು ಉತ್ತರ ಪ್ರದೇಶದ ಬಸ್ತಿ ನದಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಸಣ್ಣ ದೋಣಿಯ ಮೇಲೆ ಹೆಚ್ಚು ಮಂದಿ ಏರಿದ್ದು, ದೋಣಿ ಭಾರ ತಡೆಯಲಾರದೆ ವಾಲಿದೆ. ಈ ವೇಳೆ ಆಯತಪ್ಪಿ ಬಿದ್ದಿದ್ದಾರೆ. ರಾಮಪತಿ ರಾಮ್ ತ್ರಿಪಾಠಿ, ಸಂಸದ ಹರೀಶ್ ದ್ವಿವೇದಿ, ಶಾಸಕ ರಾಮ್ ಚೌಧರಿ, ಜಿಲ್ಲಾ ವರಿಷ್ಠಾಧಿಕಾರಿ ದಿಲೀಪ್ ಕುಮಾರ್ ಮತ್ತಿತರರು ನದಿಗೆ ಬಿದ್ದವರು ಎನ್ನಲಾಗಿದೆ. ಅಲ್ಲೇ ಇದ್ದ ಪೊಲೀಸರು ಇವರುಗಳನ್ನು ರಕ್ಷಿಸಿದ್ದಾರೆ.