ಡಿಸೆಂಬರ್ 31 ರ ಒಳಗಾಗಿ ಅಂದರೆ ಈ ವರ್ಷಾಂತ್ಯದ ಮೊದಲು ಡೆಬಿಟ್ ಕಾರ್ಡ್ ನಲ್ಲಿ ಮ್ಯಾಗ್ನಟಿಕ್ ಸ್ಪ್ರೈಪ್ ಬದಲಿಗೆ ಇಎಂವಿ ಚಿಪ್ ಗೆ ಬದಲಾಯಿಸಿಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ.
ಕೇವಲ ಚಿಪ್ ಆಧಾರಿತ ಮತ್ತು ಪಿನ್ ಹೊಂದಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ನೀಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳಿಗೆ ತಿಳಿಸಿದೆ. ಗ್ರಾಹಕರು ವಂಚನೆಗೆ ಒಳಗಾಗುವಂತೆ ಮಾಡುವುದು ಇದರ ಉದ್ದೇಶ.
ಇಎಂವಿ ಚಿಪ್ ಆಧಾರಿತ ಕಾರ್ಡ್ ಗಳು ನಕಲಿ ಕಾರ್ಡ್ ಗಳ ವಂಚನೆಯಿಂದ ಗ್ರಾಹಕರನ್ನು ರಕ್ಷಿಸುತ್ತದೆ. ಕಾರ್ಡ್ ಕಳವಾದರೆ ಅಥವಾ ಕಳೆದು ಹೋದರೆ ವಂಚನೆ ಆಗುವುದನ್ನು ತಪ್ಪಿಸುತ್ತದೆ.
ಇಎಂವಿ ಅಂದರೆ ಯುರೋಪೇ ಮಾಸ್ಟರ್ ಕಾರ್ಡ್ ವೀಸಾ ಮತ್ತು ಪಿನ್ ಎಂದರೆ ಪರ್ಸನಲ್ ಐಡೆಂಟಿಫಿಕೇಶನ್ ನಂಬರ್.
Protect yourself from fraudulent activities by applying for an EMV Chip Card with SBI free of cost. It’s the latest standard in debit card security. Know more:https://t.co/hgDrKXDjeX#StateBankOfIndia #SBI #DebitCards #EMVChipDebitCard #EMV #RBI #Guidelines #MakeAChange pic.twitter.com/qIzPbixp37
— State Bank of India (@TheOfficialSBI) August 25, 2018