ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮಯಾಂತಿ ಲ್ಯಾಂಗರ್ ಸಹ ಕ್ರಿಕೆಟ್ ಜಗತ್ತಿನ ಅಭಿಮಾನಿಗಳಿಗೆ ಚಿರಪರಿಚಿತರು.
ಕ್ರೀಡಾಲೋಕ, ಅದರಲ್ಲೂ ಕ್ರಿಕೆಟ್ ಜಗತ್ತಿನ ಖ್ಯಾತ ನಿರೂಪಕಿ ಮಯಾಂತಿ.
ಇವರೀಗ ತನ್ನ ಪತಿ ಸ್ಟುವರ್ಟ್ ಬಿನ್ನಿಯ ಮೊದಲ ಭೇಟಿಯ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಆರಂಭದಲ್ಲಿ ಮಯಾಂತಿಗೆ ಸ್ಟುವರ್ಟ್ ಬಿನ್ನಿ ಯಾರಂತನೇ ಗೊತ್ತೇ ಇರಲಿಲ್ಲವಂತೆ.
ಕ್ರಿಕೆಟ್ ಮೈದಾನದಲ್ಲಿ ನಿರೂಪಣೆ ಮಾಡುವಾಗ ಸಹೋದ್ಯೋಗಿಯೊಬ್ಬರು ‘ಈತ ಸ್ಟುವರ್ಟ್ ಬಿನ್ನಿ, ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಮಗ ‘ ಎಂದು ಹೇಳಿದ್ದರಂತೆ. ಬಳಿಕ ಮಾಯಂತಿ ರೋಜರ್ ಬಿನ್ನಿ ಯಾರಂತ ಕೇಳಿದ್ದರಂತೆ.