ಅದೆಷ್ಟೋ ಸಲ ಅದೆಷ್ಟೋ ಜನರನ್ನು ನಾವು ಗುರುತಿಸೋದೇ ಇಲ್ಲ..! ರಸ್ತೆಯಲ್ಲಿ ಕಸ ಗುಡಿಸುವ ಪೌರ ಕಾರ್ಮಿಕರು, ನಮ್ಮನ್ನು ಇಲ್ಲಿಂದಲ್ಲಿಗೆ ಕರ್ಕೊಂಡು ಹೋಗೋ ಆಟೋ, ಟ್ಯಾಕ್ಸಿ ಡ್ರೈವರ್, ಬಸ್ಸಲ್ಲಿ ನಗುಮುಖದಿಂದ ಸ್ವಾಗತ ಮಾಡೋ ಕಂಡಕ್ಟರ್, ಬಿಸಿಲಲ್ಲಿ ಬಳಲಿದರೂ ತಮ್ಮ ಕರ್ತವ್ಯ ಪಾಲಿಸೋ ಟ್ರಾಫಿಕ್ ಪೊಲೀಸ್, ನಮ್ಮ ಆಫೀಸ್ ಬಾಯ್, ಆಫೀಸ್ ಬಿಲ್ಡಿಂಗ್ ಕಾಯುವ ಸೆಕ್ಯೂರಿಟಿ, ಪೇಪರ್ ಹಾಕೋ ಹುಡುಗ… ಹೀಗೆ ಅದೆಷ್ಟೋ ಜನ..! ಅವರು ನಮ್ಮ ದಿನನಿತ್ಯದ ಜೀವನದಲ್ಲಿ ಅತ್ಯಂತ ಪ್ರಮುಖರು..! ಆದ್ರೆ ಅವರು ನಮಗೆ ಅಂತಹ ಇಂಪಾರ್ಟೆಂಟ್ ಅಲ್ಲ ಅನ್ನೋ ತರ ನಮ್ಮ ಭಾವನೆ..! ಆದ್ರೆ ಈ ವೀಡಿಯೋ ಆ ಭಾವನೆಯನ್ನು ಕಿತ್ತುಹಾಕಿಸಸುತ್ತೆ..! ಬಿಪ್ಯಾಕ್ ಸಂಸ್ಥೆಯ ಅನಿಲ್ ಶೆಟ್ಟಿ ನಿರ್ಮಾಣ ಮಾಡಿರೋ ಈ ವೀಡಿಯೋದಲ್ಲಿ ಅಂತಹ `ನಮ್ಮವರಿಗೆ’ ಗೌರವ ಸಲ್ಲಿಸುವ ದೃಶ್ಯಗಳಿವೆ..! ಕನ್ನಡದ ಹೆಮ್ಮೆಯ ಗಾಯಕ, ಸಂಗೀತ ನಿರ್ದೇಶಕ ಆಲ್ ಓಕೆ. ಇದಕ್ಕೆ ಸಂಗೀತ ನೀಡಿ, ಸಾಹಿತ್ಯ ಬರೆದು, ನಿರ್ದೇಶನ ಮಾಡಿದ್ದಾರೆ..! ಅವರ ಗೆಳೆಯರಾದ ಮಾರ್ಟಿನ್ ಯೋ, ಎಸ್.ಐ.ಡಿ, ಎಂ.ಸಿ.ಬಿಜ್ಜು, ಅಜಯ್ ಈ ತಂಡದಲ್ಲಿ ಅಲೋಕ್ ಜೊತೆಯಾಗಿದ್ದಾರೆ..! ಅವರ ಈ ಅದ್ಭುತ ಗೀತೆಗೆ ನಮ್ಮದೂ ಒಂದು ಸೆಲ್ಯೂಟ್..!
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಐಎಎಸ್ ಅಧಿಕಾರಿ ಏಕೆ ಕೆಲಸ ಬಿಟ್ಟರು ಗೊತ್ತಾ..? ಐಎಎಸ್ ಕೆಲಸ ಬಿಡುವಂತೆ ಮಾಡಿದ ಕೆಲಸ ಯಾವುದು..?
ಭಾರತದಲ್ಲಿ ಮದುವೆಯ ಬಂಧಕ್ಕೆ ಬೆಲೆ ಇಲ್ಲದಂತಾಗುತ್ತಿದೆಯೇ..?
ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!