ಶನಿ ಮತ್ತು ಮಹಾಕಾಳಿ ಧಾರವಾಹಿಯ ಶಿವ ಖ್ಯಾತಿಯ ನಟ ಅರ್ಜುನ್ ಈಗ ಜನನಾಯಕ.
ಧಾರವಾಹಿಯಲ್ಲಿ ಅದ್ಭುತ ನಟನೆಯ ಮೂಲಕ ಜನಮನ ಗೆದ್ದ ನಟ ಅರ್ಜುನ್ ಅವರನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ.
ಈ ಮೂಲಕ ಅರ್ಜುನ್ ರಾಜಕೀಯಕ್ಕೆ ಭರ್ಜರಿ ಎಂಟ್ರಿಕೊಟ್ಟಿದ್ದಾರೆ.
ಹೌದು, ತಿ. ನರಸೀಪುರ ಪುರಸಭೆ 14ನೇ ವಾರ್ಡ್ ನ ಕೌನ್ಸಿಲರ್ ಆಗಿ ಅರ್ಜುನ್ ಜಯಭೇರಿ ಬಾರಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅರ್ಜುನ್ ಕೊರಳಿಗೆ ವಿಜಯಮಾಲೆ ಬಿದ್ದಿದೆ.
ನಟನಾಗಿ ಮಿಂಚುತ್ತಿರುವ ಅರ್ಜುನ್ ರಾಜಕೀಯದಲ್ಲೂ ಮಿಂಚಿನ ಸಂಚಲನ ಉಂಟುಮಾಡಿ ಜನಸೇವೆಯ ಮೂಲಕ ದೊಡ್ಡ ಯಶಸ್ಸನ್ನುಗಳಿಸಲಿ ಎಂಬುದು ಅಭಿಮಾನಿಗಳ ಆಶಯ.