ಸಲಿಂಗಿಗಳಿಗೆ ಸುಪ್ರೀಂ ಕೋರ್ಟ್ ಉಡುಗೊರೆ ನೀಡಿದ್ದು, ಸಲಿಂಗ ಕಾಮ ಅಪರಾಧವಲ್ಲ ಎಂಬ ತೀರ್ಪು ನೀಡಿದೆ.
ಇಂದು ಐಪಿಸಿ ಸೆಕ್ಷನ್ 377ರ ವಿಚಾರಣೆ ನಡೆಸಿದ ಸಿಐಜೆ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದೆ.
ಭಾರತದಲ್ಲಿ ಸಲಿಂಗಕಾಮ ಅಪರಾಧವೇ ಅಥವಾ ಅಲ್ಲವೆ ಎಂದು ಪರಿಗಣಿಸುವ ಐಪಿಸಿ ಸೆಕ್ಷನ್ 377ರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಈ ಮಹತ್ವದ ತೀರ್ಪಿತ್ತಿದೆ.
ಈ ವೇಳೆ 156 ವರ್ಷಗಳ ಹಳೆಯ ಐಪಿಸಿ ಸೆಕ್ಷನ್ ರದ್ದುಗೊಳಿಸಿದಂತಾಗಿದೆ.
ಹೋಟೆಲ್ ಉದ್ಯಮಿ ಕೇಶವ್ ಸೂರಿ ಎಂಬುವವರು ಸೆಕ್ಷನ್ 377ರ ವಿರುದ್ಧ ಅರ್ಜಿಸಲ್ಲಿಸಿದ್ದರು.