ಇವಳೆಂಥಾ ಪಾಪಿ ತಾಯಿ…! ತನ್ನ ಹಾಳಾದ ಲವ್ ಗೆ ಮಕ್ಕಳ ಜೀವವನ್ನೇ ತೆಗೆದು ಬಿಟ್ಟಿದ್ದಾಳೆ…!
ಆಕೆಯ ಹೆಸರು ಅಭಿರಾಮಿ ಅಂತ. ತಮಿಳುನಾಡಿನವಳು. ಪತಿ ಸುಂದರಂ ಹಾಗೂ ಪುಟ್ಟ ಮಕ್ಕಳಾದ ಅಜಯ್ ಮತ್ತು ಕರ್ನಿಕಾ ಜೊತೆ ಆರಾಮಾಗಿ ಕಾಲ ಕಳೆಯ ಬಹುದಿತ್ತು…ಆದರೆ, ಈ ಪುಣ್ಯಾತ್ಗಿತ್ತಿಗೆ ವಯಸ್ಸಲ್ಲದ ವಯಸ್ಸಲ್ಲಿ ಲವ್ ಆಗಿದೆ.
ಆಗಾಗ ಬಿರಿಯಾನಿ ಅಂಗಡಿಗೆ ಹೋಗ್ತಿದ್ದ ಈಕೆಗೆ ಆ ಅಂಗಡಿಯ ಹುಡುಗ ಮಾಡಿ ಕೊಡ್ತಾ ಇದ್ದ ಬಿರಿಯಾನಿ ಇಷ್ಟವಾಗಿದೆ. ಬರ್ತಾ ಬರ್ತಾ ಬಿರಿಯಾನಿ ಜೊತೆಗೆ ಆ ಹುಡಗನೂ ಇಷ್ಟವಾಗಿದ್ದಾನೆ. ಇಬ್ಬರ ನಡುವೆ ಪ್ರೀತಿ ಹುಟ್ಟಿದೆ.
ತನ್ನ ಪ್ರೀತಿಗೆ ಮಕ್ಕಳು ಮತ್ತು ಗಂಡ ಅಡ್ಡ ಬರ್ತಾರೆ ಅನ್ನೋದನ್ನು ತಿಳಿದ ಈಕೆ ಮೂವರನ್ನು ಕೊಲ್ಲಲು ನಿರ್ಧರಿಸಿ ಬಿಟ್ಟಿದ್ದಳಂತೆ. ಪತಿ ವಿಜಯ್ ಜೀವ ಗಟ್ಟಿಗಿತ್ತು. ಇವರನ್ನು ಕೊಲ್ಲಲು ಆಕೆಗೆ ಆಗಲಿಲ್ಲ.
ಆದರೆ , ತನ್ನ ಇಬ್ಬರು ಮಕ್ಕಳಿಗೆ ಹಾಲಿನಲ್ಲಿ ವಿಷ ಬೆರೆಸಿ, ಬಳಿಕ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾಳೆ…!
ಪತಿ ವಿಜಯ್ ಮನೆಗೆ ಬಂದಾಗ ಮಕ್ಕಳು ಹೆಣವಾಗಿ ಬಿದ್ದಿರುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಪತ್ನಿ ಮಕ್ಕಳನ್ನು ಕೊಂದು ಪರಾರಿ ಆಗಿರುವುದು ಗಮನಕ್ಕೆ ಬಂದು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.