No menu items!
17.7 C
Munich
Friday, May 1, 2026

ಗಣೇಶ ಹಬ್ಬಕ್ಕೆ ಕನ್ನಡ ದೇಶದೊಳ್ ಹಾಡು ಬಿಡುಗಡೆ

Must read

ದಿನದಿಂದ ದಿನಕ್ಕೆ ಕುತೂಹಲ ಗರಿಗೆದರಿಸುತ್ತಿರುವ ‘ಕನ್ನಡ ದೇಶದೊಳ್’ ಸಿನಿಮಾ ನವೆಂಬರ್ 1ರಂದು ಬಿಡುಗಡೆ ಆಗಲಿದೆ ಎಂಬುದು ನಿಮಗೆ ಈಗಾಗಲೇ ಗೊತ್ತಿದೆ. ಇದೀಗ ತಂಡ ಗೌರಿ-ಗಣೇಶ ಹಬ್ಬದಂದು ತನ್ನ ಮೊದಲ ಹಾಡನ್ನು ಬಿಡುಗಡೆ ಮಾಡಲು ತಯಾರಾಗಿದೆ.

ಕಳೆದ ಮೂರು ವರ್ಷಗಳಿಂದ ಕನ್ನಡದ ಬಗ್ಗೆ ವಿನೂತನ ರೀತಿಯಲ್ಲಿ ಅಭಿಯಾನ ಮಾಡಿಕೊಂಡು ಬರುತ್ತಿರುವ ಯುವಕರ ತಂಡ ಮಾಡಿರುವ ಸಿನಿಮಾವೇ ಈ‌ ‘ಕನ್ನಡ ದೇಶದೊಳ್’….!

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ದೂಳೆಬ್ಬಿಸಿರುವ ತಂಡ ಈಗ ಸಿನಿಮಾ‌ ಮೂಲಕ ಕರುನಾಡ ಸಂಸ್ಕೃತಿ, ಸಂಪ್ರದಾಯ , ಆಚರಣೆ, ಇತಿಹಾಸವನ್ನು, ಶ್ರೀಮಂತಿಕೆಯನ್ನು ಸಾರಲಿದೆ. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಸಂಭ್ರಮ…ಇಂದೇ ‘ಕನ್ನಡ ದೇಶದೊಳ್’ ಬಿಡುಗಡೆ ಮಾಡಲು ತಂಡ ಉತ್ಸುಕವಾಗಿದೆ.

ಈಗಾಗಲೇ ವಿಭಿನ್ನ ರೀತಿಯಲ್ಲಿ ಅದ್ಧೂರಿಯಾಗಿ ತನ್ನ ಸಿನಿಮಾವನ್ನು ಪ್ರಚಾರ ಮಾಡುತ್ತಿದೆ ಉತ್ಸಾಹಿ ಯುವಕರ ತಂಡ.‌ ಕನ್ನಡ ದೇಶದೊಳ್ ಎಂಬ ಶೀರ್ಷಿಕೆಯನ್ನು ಹೊಂದಿರುವ ಅಂಗಿಯನ್ನು ಸಿನಿಮಾ, ಕ್ರೀಡೆ, ಸಾಹಿತ್ಯ ಹೀಗೇ ಬೇರೆ ಬೇರೆ ಕ್ಷೇತ್ರದ ಸಾಧಕರಿಗೆ ನೀಡಿ ಅವರ ಶುಭಹಾರೈಕೆಯನ್ನು ಪಡೆಯುತ್ತಿದ್ದಾರೆ. ಆಟೋ, ಬಸ್, ಅಂಗಡಿಯ ಮುಂಗಟ್ಟು, ಬೈಕ್, ಕ್ಯಾಬ್ ಹೀಗೆ ಎಲ್ಲಾ ಕಡೆ ಸಿನಿಮಾ ಶೀರ್ಷಿಕೆ ಪ್ರಚಾರ ಮಾಡಿದೆ ಚಿತ್ರತಂಡ.

 

ಕನ್ನಡ ದೇಶದೊಳ್ ಎಂಬ ಶೀರ್ಷಿಕೆಯಲ್ಲೇ ಕನ್ನಡದ ಗಟ್ಟಿತನವಿದೆ, ಅಭಿಮಾನವಿದೆ…ಶೀರ್ಷಿಕೆಯೇ ಆಕರ್ಷಣೀಯವಾಗಿದ್ದು, ಜನರನ್ನು ಸೆಳೆಯುತ್ತಿದ್ದು ದೊಡ್ಡಮಟ್ಟಿನ ನಿರೀಕ್ಷೆ ಹುಟ್ಟುಹಾಕಿದೆ.
ಅವಿರಾಮ್ ಕಂಠೀರವ ಎಂಬ ನವ ನಿರ್ದೇಶಕ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಸಿನಿರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಜೆ ಎಸ್ ಎಮ್ ಪ್ರೊಡಕ್ಷನ್ ನವರು ಸಿನಿಮಾ ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ 7 ಹಾಡುಗಳಿವೆ. ರಾಜೇಶ್ ಕೃಷ್ಣನ್, ಅನನ್ಯ ಭಟ್, ಸಿದ್ಧಾರ್ಥ್ ಬೆಳುಮನ್ನು, ಶಶಾಂಕ್ ಶೇಷಗಿರಿ, ಸ್ಪರ್ಶ, ಸಾತ್ವಿಕ್ ಹಾಡಿದ್ದಾರೆ. ಈಗಾಗಲೇ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article