ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗುವಲ್ಲಿ ಪದೇ ಪದೇ ಎಡವುತ್ತಲೇ ಇದೆ.
ತಂಡವನ್ನು ಹೇಗಾದರೂ ಮಾಡಿ ಬಲ ಪಡಿಸಿ ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡಲೇ ಬೇಕು ಎಂದು ಆರ್ ಸಿಬಿ ಯ ಆಡಳಿತ ಮಂಡಳಿ ಭರ್ಜರಿ ಸರ್ಜರಿ ಮಾಡ್ತಿದೆ.
ತಂಡದ ಕೋಚ್ ಹುದ್ದೆಯಿಂದ ಡೇನಿಯಲ್ ವೇಟೋರಿಯನ್ನು ಕೆಳಗಿಳಿಸಿ ಅವರ ಸ್ಥಾನಕ್ಕೆ ಟೀಂ ಇಂಡಿಯಾದ ಮಾಜಿ ಕೋಚ್ ಗ್ಯಾರಿ ಕ್ರಿಸ್ಟನ್ ಮತ್ತು ಮಾಜಿ ವೇಗಿ ಆಶಿಶ್ ನೆಹ್ರಾ ಅವರನ್ನು ತಂದು ಕೂರಿಸಿರುವ ಆಡಳಿತ ಮಂಡಳಿ ಟೀಂ ಇಂಡಿಯಾದ ನಾಯಕ,ರನ್ ಮಷಿನ್ ವಿರಾಟ್ ಕೊಹ್ಲಿ ಅವರಿಗೆ ತಮ್ಮ ತಂಡದ ನಾಯಕತ್ವ ಸ್ಥಾನದಿಂದ ಕೊಕ್ ನೀಡಲು ಉದ್ದೇಶಿಸಿದೆ ಎನ್ನಲಾಗುತ್ತಿದೆ.