ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾ ಹೊಸ ಅವತಾರದಲ್ಲಿ ರಿ ರಿಲೀಸ್ ಆಗಿ ದೊಡ್ಡಮಟ್ಟಿನ ಯಶಸ್ಸು ಕಂಡಿತ್ತು.
ಈಗ ಡಾ. ರಾಜ್ ಕುಮಾರ್ -ವಿಷ್ಣುವರ್ಧನ್ ಅಭಿನಯದ ಗಂಧದ ಗುಡಿ ಸಿನಿಮಾ ಮತ್ತೆ ಹೊಸ ಅವತಾರದಲ್ಲಿ ರಿ ರಿಲೀಸ್ ಆಗಲಿದೆ.
ಇದು ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಸಿನಿಮಾ.ಅಣ್ಣಾವ್ರು ಅರಣ್ಯಾಧಿಕಾರಿಯಾಗಿ ಸದ್ದು ಮಾಡಿದ್ದರು.ವಿಷ್ಣುವರ್ಧನ್ ಅವರು ಖಳನಾಯಕನಾಗಿ ಸೈ ಅನಿಸಿಕೊಂಡಿದ್ದರು. ಈ ಸಿನಿಮಾ ಇದೀಗ ಡಿಜಿಟಲ್ ರೂಪದಲ್ಲಿ ಗಣೇಶ ಹಬ್ಬದಂದು ರಿಲೀಸ್ ಆಗ್ತಿದೆ.