ಕಳೆದ ಎರಡು ದಿನಗಳಿಂದ ಟ್ರೆಂಡಿಂಗ್ ನಲ್ಲಿರೋದು ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಅವರ ಬ್ರೇಕ ಅಪ್ ಕಹಾನಿ..!
ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಅವರನ್ನು ಒಂದು ಸಿನಿಮಾ ಮೂಲಕ ಒಂದುಗೂಡಿಸಿತ್ತು ಸ್ಯಾಂಡಲ್ ವುಡ್. ಆದರೆ, ಟಾಲಿವುಡ್ ಒಂದೇ ಒಂದು ದೃಶ್ಯದಲ್ಲಿ ಬೇರ್ಪಡಿಸಿ ಬಿಟ್ಟಿತು….!
ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಅವರನ್ನು ಸ್ಯಾಂಡಲ್ ವುಡ್ ಗೆ ಬರಮಾಡಿಕೊಂಡರು. ಜೊತೆ ಜೊತೆಗೆ ರಶ್ಮಿಕಾ ರಕ್ಷಿತ್ ಹೃದಯವನ್ನೂ ಕದ್ದು ಮನಸ್ಸಿಗೆ ಲಗ್ಗೆ ಇಟ್ಟರು. ಇಬ್ಬರ ಪ್ರೀತಿ ಮದುವೆ ತನಕ ಬಂದಿತ್ತು. ನಿಶ್ಚಿತಾರ್ಥದ ಮೂಲಕ ಮದುವೆಗೂ ಅಂಕಿತ ಸಿಕ್ಕಿತ್ತು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಅಂಜನೀಪುತ್ರದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಚಮಕ್ ನಲ್ಲಿ ನಟಿಸಿದ ರಶ್ಮಿಕಾ ಅವರಿಗೆ ತೆಲುಗು ಚಿತ್ರರಂಗ ಸಹ ಕೈ ಬೀಸಿಕರೆಯಿತು.
ಛಲೋ ರಶ್ಮಿಕಾ ನಟಿಸಿದ ಟಾಲಿವುಡ್ ನ ಮೊದಲ ಸಿನಿಮಾ. ಚಿತ್ರ ಗೆಲ್ಲದೆ ಇದ್ದರೂ ರಶ್ಮಿಕಾ ತೆಲುಗು ಸಿನಿ ರಸಿಕರಿಗೆ ಇಷ್ಟವಾದರು. ವಿಜಯ್ ದೇವರಕೊಂಡ ಅಭಿನಯದ ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ರಶ್ಮಿಕಾ ನಟಿಸಿದರು. ಈ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆ ಗಾಸಿಪ್ ಗಳು ಹರಿದಾಡಿದವು.
ಲಿಪ್ ಲಾಕ್ ಸೀನ್ ವೈರಲ್ ಆಗುತ್ತಿದ್ದಂತೆ ಟ್ರೋಲ್ ಗಳ ಹಾವಳಿಯಿಂದ ಬೇಸತ್ತು ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾಕ್ಕೆ ಗುಡ್ ಬೈ ಹೇಳಿದ್ರು. ಇದೀಗ ಕುಟುಂಬದವರೊಡನೆ ಮಾತುಕತೆ ನಡಿಸಿ ಪರಸ್ಪರ ಒಪ್ಪಿ ರಶ್ಮಿಕಾ- ರಕ್ಷಿತ್ ದೂರವಾಗಿದ್ದಾರೆ.
ಕನ್ನಡ ಚಿತ್ರ ಒಂದರಿಂದ ಒಂದಾಗಿದ್ದ ಜೋಡಿ ತೆಲುಗು ಚಿತ್ರದಿಂದ ದೂರವಾಗಿದೆ.