ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಕ್ಲಾಸಿಕ್ ಸಿನಿಮಾ ‘ನಾಗರಹಾವು’. ರಾಮಾಚಾರಿಯಾಗಿ ವಿಷ್ಣುವರ್ಧನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಿನಿಮಾವಿದು.
ನಾಲ್ಕು ದಶಕದ ಬಳಿಕವೂ ನಾಗರಹಾವಿನ ಹವಾ ಹಾಗೇ ಇದೆ. ಡಿಜಿಟಲ್ ಫಾರ್ಮೆಟ್ ನಲ್ಲಿ ಹೊಸ ಅವತಾರವಿತ್ತು ಬಂದ ನಾಗರಹಾವು ಸಹ ಗೆದ್ದಿದೆ.
ಕನ್ನಡಿಗರ ಮನವಿಯ ಮೇರೆಗೆ ಬಾಲಾಜಿ ವೀರಸ್ವಾಮಿ ಅವರು ವಿದೇಶದಲ್ಲೂ ನಾಗರಹಾವನ್ನು ರಿಲೀಸ್ ಮಾಡಲು ನಿರ್ಧರಿಸಿ ಮೊದಲಿಗೆ ಅಮೆರಿಕಾದಲ್ಲಿ ರಿಲೀಸ್ ಮಾಡಿದ್ದಾರೆ.
ಕಳೆದವಾರ ಅಮೆರಿಕಾದಲ್ಲಿ ರಿಲೀಸ್ ಆಗಿದೆ. 23 ಸೆಟ್ ಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು ,ಎಲ್ಲಾ ಕಡೆಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದು ಹಳೆಯ ಸಿನಿಮಾವಲ್ಲ. ಹೊಸ ಸಿನಿಮಾ. ಕಥೆ ಅಂದಿಗೂ- ಇಂದಿಗೂ ಎಂದೆಂದೆಂಗೂ ಪ್ರಸ್ತುತ ಅಂತ ಅಭಿಮಾನಿಗಳು ಉದ್ಗರಿಸಿದ್ದಾರೆ. ಇದು ಬರೀ ಹಾವಲ್ಲ ನಾಗರಹಾವು ಎಂದು ವಿದೇಶಿಗರು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಅಮೆರಿಕಾದಲ್ಲಿ ಇನ್ನೂ ಒಂದುವಾರ ಪ್ರದರ್ಶನ ಕಾಣಲಿದೆ. ನಂತರ ಯುಕೆ, ಯುಎಇ, ಯುರೋಪ್ ನಲ್ಲಿ ಪ್ರದರ್ಶನ ನಡೆಸಲು ಉದ್ದೇಶಿಸಲಾಗಿದೆ.