ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಗೊತ್ತೇ ಇದೆ. ಆದರೆ, ಈ ಬಾರಿ ಗಣೇಶ್ ತಂಡವೇ ಗೆಲ್ಲುತ್ತದೆ ಎಂದು ಸುದೀಪ್ ಅವರಿಗೆ ಮೊದಲೇ ಗೊತ್ತಿತ್ತು. ಹಾಗಂತ ಇದು ಮ್ಯಾಚ್ ಫಿಕ್ಸಿಂಗ್ ಅಂತ ಅನ್ಕೋಬೇಡಿ.
ಎರಡನೇ ದಿನ ಸುದೀಪ್ ಮತ್ತು ಗಣೇಶ್ ತಂಡಗಳ ನಡುವಿನ ಪಂದ್ಯದ ವೇಳೆ ಖಾಸಗಿ ಚಾನಲ್ ವೊಂದರ ವರದಿಗಾರ್ತಿ ಜೊತೆ ಇಬ್ಬರೂ ಸಹ ಮಾತಾಡಿದ್ರು. ಆಗ ಸುದೀಪ್ ನಾವು ನಿನ್ನೆಯ ಪಂದ್ಯದಲ್ಲಿ ಸೋತು ಫೈನಲ್ ಗೆ ಹೋಗುವ ಅವಕಾಶ ಕಳೆದುಕೊಂಡಿದ್ದೆವು. ಇನ್ನು ನಮ್ಮ ಗ್ರೂಪ್ ನಲ್ಲಿ ಗಣೇಶ್, ಉಪೇಂದ್ರ ಅವರ ತಂಡ ಮತ್ತು ನನ್ನ ತಂಡ ಇರೋದು. ನಂಗೆ ಗಣೇಶ್ ತಂಡ ಗೆಲ್ಲುತ್ತದೆ ಎಂದು ಅನಿಸತ್ತು ಎಂದು ತಮಾಷೆ ಮಾಡುತ್ತಾ ಹೇಳಿದರು.
ಬಳಿಕ ಗಣೇಶ್ ಕೂಡ ನಾನೇ ಗೆಲ್ತೀನಿ ಅಂತ ಅನಿಸಿತ್ತು ಎಂದು ನಗೆ ಚಟಾಕಿ ಹಾರಿಸಿದರು.
ಹೀಗೆ ಸ್ಟಾರ್ ಆಟಗಾರರನ್ನು ಕೆಸಿಸಿ ಒಂದೆಡೆ ಸೇರಿಸುವುರ ಜೊತೆಗೆ ಕ್ರೀಡಾ ಸ್ಪೂರ್ತಿ ಸಹ ಮೆರೆಸಿದೆ.