ತಮ್ಮ ಬ್ರೇಕ್ ಅಪ್ ಬಗ್ಗೆ ಹಾಗೂ ರಶ್ಮಿಕಾ ಕುರಿತು ಹರಿದಾಡುತ್ತಿರುವ ಮಾತುಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ.
ಫೇಸ್ ಬುಕ್ ಪೇಜ್ ಗೆ ತಾತ್ಕಾಲಿಕವಾಗಿ ಮರಳಿರುವ ರಕ್ಷಿತ್ ಶೆಟ್ಟಿ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಬೇರೆ ವಿಷಯಗಳತ್ತ ಗಮನ ನೀಡಲು ಸೋಶಿಯಲ್ ಮೀಡಿಯಾದಿಂದ ದೂರ ಇದ್ದೆ. ಕೆಲವೊಂದು ವಿಷಯಗಳನ್ನು ಸ್ಪಷ್ಟಪಡಿಸಲು ಬಂದಿದ್ದೇನೆ ಎಂದಿರುವ ಅವರು , ರಶ್ಮಿಕಾ ಬಗ್ಗೆ ಮಾತಾಡುವುದನ್ನು ನಿಲ್ಲಿಸಲು ಮನವಿ ಮಾಡಿದ್ದಾರೆ.
ರಶ್ಮಿಕಾ ಬಗ್ಗೆ ಪ್ರತಿಯೊಬ್ಬರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಾನಿಲ್ಲಿ ಯಾರನ್ನೂ ದೂರುವುದಿಲ್ಲ. ನಾವೆಲ್ಲರೂ ಕಂಡಿದ್ದನ್ನು, ಹೇಳಿದ್ದನ್ನೇ ನಂಬುತ್ತೇವೆ.ಆದರೆ, ಇವುಗಳೇ ನಿಜವಲ್ಲ. ಬಹುತೇಕ ಸಲ ಮತ್ತೊಂದು ದೃಷ್ಟಿಕೋನದಲ್ಲಿ ಯೋಚಿಸದೇ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ನಾನು ಎರಡು ವರ್ಷಕ್ಕೂ ಹೆಚ್ಚಿನ ಕಾಲದಿಂದ ರಶ್ಮಿಕಾಳನ್ನು ತಿಳಿದಿದ್ದೇನೆ. ನಿಮ್ಮೆಲ್ಲರಿಗಿಂತ ರಶ್ಮಿಕಾ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಇಲ್ಲಿ ಅನೇಕ ಅಂಶಗಳು ಪಾತ್ರ ನಿರ್ವಹಿಸುತ್ತಿವೆ. ದಯವಿಟ್ಟು ಜಡ್ಜ್ ಮಾಡುವುದನ್ನು ನಿಲ್ಲಿಸಿ. ಅವಳನ್ನು ಶಾಂತವಾಗಿಡಲು ಬಿಡಿ. ಶೀಘ್ರದಲ್ಲೇ ಎಲ್ಲಾ ಅಂತಿಮವಾಗುತ್ತದೆ. ಎಲ್ಲರೂ ವಾಸ್ತವವನ್ನು ಅರಿಯುತ್ತೀರಿ. ಮಾಧ್ಯಮಗಳ ಸುದ್ದಿಯ ಹಿಂದೆ ಹೋಗಬೇಡಿ. ಅವರುಗಳಲ್ಲಿ ಯಾರೂ ಕೂಡ ನನ್ನ ಮತ್ತು ರಶ್ಮಿಕಾಳಿಂದ ಮಾಹಿತಿ ಪಡೆದಿಲ್ಲ. ಬಹುತೇಕರು ಅವರವರ ಅವಶ್ಯಕತೆಗೆ ತಕ್ಕಂತೆ ಸುದ್ದಿಗಳನ್ನು ಸೃಷ್ಠಿಸಿಕೊಂಡಿದ್ದಾರೆ. ಅದು ಅವರ ಕಲ್ಪನೆಗಳಷ್ಟೇ, ವಾಸ್ತವ ಅಲ್ ಎಂದು ಹೇಳಿದ್ದಾರೆ.