ಆರ್ ಬಿ ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಬ್ಯಾಂಕ್ ವಂಚಕರ ಪಟ್ಟಿ ತಯಾರಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಕಳುಹಿಸಿದ್ದರಂತೆ. ಆದರೆ, ಈ ಪಟ್ಟಿಯನ್ನು ಪ್ರಧಾನಿಯವರ ಕಚೇರಿ ನಿರ್ಲಕ್ಷಿಸಿತ್ತು ಎಂದು ಸಂಸದೀಯ ಸಮಿತಿ ಹೇಳಿದೆ.
ಬಿಜೆಪಿ ನಾಯಕ ಮುರುಳಿ ಮೋಹನ್ ಜೋಶಿ ನೇತೃತ್ವದ ಸಮಿತಿ ನೀಡಿರುವ ವರದಿಯಲ್ಲಿ ಸಾಲ ಮರುಪಾವತಿ ಮಾಡದೆ ಸಾವಿರಾರು ಕೋಟಿ ರೂ ಉಳಿಸಿಕೊಂಡಿರುವ ಸಾಲಗಾರರು ಸರ್ಕಾರದ ವೈಫಲ್ಯತೆ ಮತ್ತು ಆರ್ಥಿಕ ಬೆಳವಣಿಗೆ ಕುಂಠಿತವಾಗಲು ಕಾರಣರಾಗಿದ್ದಾರೆ ಎನ್ನಲಾಗಿದೆ.ವರದಿ ಆಧರಿಸಿ ಪ್ರತಿಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿವೆ.
ಯುಪಿಎ ಅವಧಿಯಲ್ಲಿ 2.83 ಲಕ್ಷ ಕೋಟಿ ರೂ ಇದ್ದ ಸಾಲದ ಪ್ರಮಾಣ ಈಗ 12 ಲಕ್ಷ ಕೋಟಿಗೆ ತಲುಪಿದೆ ಎಂದು ಕಾಂಗ್ರೆಸ್ ವಕ್ತಾತ ರಂದೀಪ್ ಸುರ್ಜೆವಾಲ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.