ಟೀಂ ಇಂಡಿಯಾ ಕೆನ್ನಿಂಗ್ಟನ್ ಓವೆಲ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದೆ. ಆದರೆ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ…!
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಯಾವೊಬ್ಬ ವಿಕೆಟ್ ಕೀಪರ್ ಸಹ ಇಲ್ಲಿಯವರೆಗೆ ಇಂಗ್ಲೆಂಡ್ ನೆಲದಲ್ಲಿ ಮಾಡದ ಸಾಧನೆಯನ್ನು ರಿಷಬ್ ಮಾಡಿದ್ದಾರೆ.
ಈ ಹಿಂದೆ ಎಂ.ಎಸ್ ಧೋನಿಗಳಿಸಿದ್ದ 92 ರನ್ ಟೀ ಇಂಡಿಯಾ ವಿಕೆಟ್ ಕೀಪರ್ ಒಬ್ಬರು ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿಗಳಿಸಿದ್ದ ಅತಿಹೆಚ್ಚಿನ ರನ್ ಆಗಿತ್ತು. ಇದೀಗ ರಿಷಬ್ ಪಂತ್ ಚೊಚ್ಚಲ ಶತಕಗಳಿಸಿದ್ದಾರೆ. ಇದರೊಂದಿಗೆ ಅವರು ಇಂಗ್ಲೆಂಡ್ ನೆಲದಲ್ಲಿ ಭಾರತದ ಪರ ಶತಕಗಳಿಸಿದ ಮೊದಲ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.