ನಿರ್ದೇಶಕ ಯೋಗರಾಜ್ ಭಟ್ ಮುಗುಳು ನಗೆ ಬಳಿಕ ಕೈಗೆತ್ತಿಕೊಂಡಿರೋ ಸಿನಿಮಾ ‘ಪಂಚತಂತ್ರ’.
ಕಾಲ್ ಕೆ.ಜಿ ಖ್ಯಾತಿಯ ವಿಹಾನ್ ಗೌಡ ಹಾಗೂ ಅಕ್ಷರ ಗೌಡ ಸೋನಾಲ್ ಅಭಿನಯದ ಪಂಚತ್ರಂತ್ರದ ಚಿತ್ರೀಕರಣ ಈಗ ನಡೆಯುತ್ತಿದೆ.
ಈ ಸಿನಿಮಾದ ರೋಮ್ಯಾಂಟಿಕ್ ಚಿತ್ರಗಳು ಈಗ ಬಹಿರಂಗಗೊಂಡಿವೆ.’ಹೊಂಗೆ ಮರ ಹೂ ಬಿಟ್ಟಿದೆ. ನಾಚಿಕೆಯೂ ನನ್ನ ಜೊತೆ ಠೂ ಬಿಟ್ಟಿದೆ’ ಎನ್ನುವ ಸಾಲುಗಳಿರುವ ಹಾಡು ಅದ್ಭುತವಾಗಿ ಮೂಡಿಬಂದಿದೆ ಎನ್ನುವುದಕ್ಕೆ ಈ ರಿವೀಲ್ ಆಗಿರುವ ಸ್ಟಿಲ್ ಗಳೇ ಸಾಕ್ಷಿ.
ಇದು ಯೋಗರಾಜ್ ಭಟ್ ನಿರ್ದೇಶನದ 12ನೇ ಸಿನಿಮಾ. ಜಾಕ್ಸನ್ ಸಿನಿಮಾದ ಸನತ್ ಅಂಡ್ ಫ್ರೆಂಡ್ಸ್ ಈ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.