ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ದೂರದ ಸಂಬಂಧಿಕರು.
ಇಷ್ಟು ದಿನ ಗೊತ್ತಿರದ ಈ ವಿಷ್ಯ ಗೊತ್ತಾಗಲು ಕಾರಣವಾಗಿದ್ದು ಕೆಸಿಸಿ…!
ಕೆಸಿಸಿ ಟೂರ್ನಿ ವೇಳೆ ಗಣೇಶ್ ಮತ್ತು ಸುದೀಪ್ ಒಟ್ಟಿಗೆ ಕೂತು ಮಾತಾಡುತ್ತಿರುವಾಗ ಈ ವಿಷಯ ಗೊತ್ತಾಗಿದೆ.
ಇಬ್ಬರು ಮಾತಾಡುವಾಗ ಬೇರೆಯವರ ಪರಿಚಯ, ಸ್ನೇಹ-ಸಂಬಂಧದ ಜೊತೆ ಮಾತು ಬಂದಿದೆ. ಅವರು ಹೇಗೆ ನಿಮ್ಗೆ ಪರಿಚಯ ಎಂಬ ಮಾತುಗಳು ವಿನಿಮಯ ಆದಾಗ ಇಬ್ಬರು ದೂರದ ಸಂಬಂಧಿಗಳು ಅನ್ನೋದು ಗೊತ್ತಾಗಿದೆ.
ಸುದೀಪ್ ಈ ವಿಷಯವನ್ನು ಟ್ವೀಟ್ ಮಾಡಿದ್ದಾರೆ, ‘ ಗಣೇಶ್ ನನ್ನ ದೂರದ ಸಂಬಂಧಿ ಎಂದು ಗೊತ್ತಾಯ್ತು. ನಮ್ಮ ಮನೆಯಲ್ಲೀಗ ಚಿನ್ನವಿದ್ದು, ನಾನೀಗ ಶ್ರೀಮಂತ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
Guess what,,,, over a conversation I get to know that Ganesh is my relative … ??…
now I have gold at home… rich am I !!!
Cheers n mch luv. pic.twitter.com/hfYilcnFq9— Kichcha Sudeepa (@KicchaSudeep) September 14, 2018