ನಟಿ ಸನ್ನಿ ಲಿಯೋನ್ ಅವರ ನೃತ್ಯದೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಬೆಂಗಳೂರಿನಲ್ಲಿ ಪ್ಲಾನ್ ಮಾಡಲಾಗಿತ್ತು.
ಆದರೆ, ಕೆಲವು ಸಂಘಟನೆಗಳ ವಿರೋಧದಿಂದ ಅದು ಕ್ಯಾನ್ಸಲ್ ಆಗಿತ್ತು. ಇದೀಗ ಸನ್ನಿ ಬೆಂಗಳೂರಿನಲ್ಲಿ ಡ್ಯಾನ್ಸ್ ಮಾಡಲು ಬರ್ತಿದ್ದಾರೆ.
2018ರ ಹೊಸ ವರ್ಷಾಚರಣೆಗೆ ಸನ್ನಿ ಬಂದು ಡ್ಯಾನ್ಸ್ ಮಾಡಬೇಕಿತ್ತು. ವ್ಯವಸ್ಥಿತ ಆಯೋಜನೆಯನ್ನೂ ಮಾಡಿದ್ದರು ಆಯೋಜಕರು. ವಿರೋಧದ ಹಿನ್ನೆಲೆಯಲ್ಲಿ ಸನ್ನಿ ಬಂದಿರಲಿಲ್ಲ.
ಈಗ ಅದೇ ಆಯೋಜಕರು ಸನ್ನಿಯನ್ನು ಕರೆಸಲು ಮುಂದಾಗಿದ್ದಾರೆ. ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ಒಂದು ದಿನ ಸನ್ನಿ ವೈಭವವಿದೆ. ಡೇಟ್ ಫಿಕ್ಸ್ ಆಗಿಲ್ಲ ಎಂದು ತಿಳಿದುಬಂದಿದೆ.